ಕರ್ನಾಟಕ

karnataka

ಗಾಂಜಾ ಮಾತ್ರವಲ್ಲದೆ, ಆರೋಪಿ ವೈಭವ್ ಜೈನ್​ಗಿತ್ತು ಹವಾಲಾ ದಂಧೆ ಲಿಂಕ್​​​​​!

ಹೆಸರಿಗೆ ಮಾತ್ರ ಚಿನ್ನದ ವ್ಯಾಪಾರ. ಐಪಿಎಲ್ ಬೆಟ್ಟಿಂಗ್ ಕೂಡ ನಡೆಸುತ್ತಿದ್ದ. ಮಲ್ಲೇಶ್ವರನ ಕೋದಂಡರಾಮಪುರದಲ್ಲಿ ವಾಸವಾಗಿರುವ ಡ್ರಗ್ಸ್​ ಪ್ರಕರಣದ ಆರೋಪಿ ವೈಭವ್​ ಜೈನ್​ ಲಕ್ಷಾಂತರ ರೂಪಾಯಿ ಬೆಲೆಬಾಳುವ ಗಡಿಯಾರಗಳನ್ನು ಕಡಿಮೆ ಹಣಕ್ಕೂ ಮಾರುತ್ತಿದ್ದ ಎನ್ನಲಾಗ್ತಿದೆ.

By

Published : Sep 7, 2020, 2:17 PM IST

Published : Sep 7, 2020, 2:17 PM IST

vaibhav-jain-also-accused-of-involvement-in-the-havala-case
ಗಾಂಜಾ ಮಾತ್ರವಲ್ಲದೆ ಹವಾಲಾ ದಂಧೆಯಲ್ಲೂ ಭಾಗಿಯಾಗಿದ್ದ ಆರೋಪಿ ವೈಭವ್ ಜೈನ್

ಬೆಂಗಳೂರು:ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಗಾಂಜಾ ಕೇಸ್​​​​ನಲ್ಲಿ ದಿನ ಕಳೆದಂತೆ ಒಬ್ಬೊಬ್ಬ ಆರೋಪಿಯ ಕರಾಳ ಮುಖವಾಡ ಕಳಚಿ ಬೀಳುತ್ತಿದೆ.

ಗಾಂಜಾ ಪ್ರಕರಣದ ಎಫ್​ಐಆರ್​​ನಲ್ಲಿ 5ನೇ ಆರೋಪಿ ವೈಭವ್ ಜೈನ್ ಕೇವಲ ಮಾದಕ ವಸ್ತುಗಳ ಮಾರಾಟವಲ್ಲದೆ ಹವಾಲಾ ದಂಧೆಯಲ್ಲೂ ತೊಡಗಿಸಿಕೊಂಡಿದ್ದ ಎಂಬುದು ಬಯಲಾಗಿದೆ.

ಸದಾಶಿವನಗರ ಹಾಗೂ ಆರ್​ಎಂವಿ ಬಡಾವಣೆಗಳಲ್ಲಿ ವಾಸವಾಗಿರುವ ಶ್ರೀಮಂತರ ಮಕ್ಕಳೊಂದಿಗೆ ಈತ ಮಾದಕ ದ್ರವ್ಯ ಮಾರಾಟದ ಜೊತೆಗೆ ದುಬೈ ಲಂಡನ್ ಹಾಗೂ ಅಮೆರಿಕದಿಂದ ಭಾರತಕ್ಕೆ ಅಕ್ರಮವಾಗಿ ಹಣವನ್ನು ಸಾಗಿಸುತ್ತಿದ್ದ ಎಂಬ ಮಾಹಿತಿ 'ಈಟಿವಿ ಭಾರತ'ಕ್ಕೆ ಬಲ್ಲ ಮೂಲಗಳಿಂದ ಲಭ್ಯವಾಗಿದೆ.

ಹೆಸರಿಗೆ ಮಾತ್ರ ಚಿನ್ನದ ಅಂಗಡಿ ನಡೆಸುತ್ತಿದ್ದ. ಐಪಿಎಲ್ ಬೆಟ್ಟಿಂಗ್ ಕೂಡ ನಡೆಸುತ್ತಿದ್ದ. ಮಲ್ಲೇಶ್ವರನ ಕೋದಂಡರಾಮಪುರದಲ್ಲಿ ವಾಸವಾಗಿರುವ ಈತ, ಲಕ್ಷಾಂತರ ರೂಪಾಯಿ ಬೆಲೆಬಾಳುವ ಗಡಿಯಾರಗಳನ್ನು ಕಡಿಮೆ ಹಣಕ್ಕೂ ಮಾರುತ್ತಿದ್ದ ಎನ್ನಲಾಗುತ್ತಿದೆ.

ಇತ್ತೀಚಿಗೆ ಅದೇ ಕಾರಣಕ್ಕೆ ಮಲ್ಲೇಶ್ವರ ರಸ್ತೆಯಲ್ಲಿ ವೈಭವ್ ಪತ್ನಿಯ ತಂದೆ ಹಾಗೂ ಅಣ್ಣನೊಂದಿಗೆ ಗಲಾಟೆ ಮಾಡಿದ್ದಕ್ಕೆ ಸರಿಯಾಗಿ ಗೂಸಾ ತಿಂದಿದ್ದ.

ಹಲವು ವರ್ಷಗಳಿಂದ ಹವಾಲಾ ದಂಧೆ, ಮಾದಕ ವಸ್ತುಗಳ ಮಾರಾಟ ನಡೆಸುತ್ತಿದ್ದ ಈತನೀಗ ಖಾಕಿಯ ಅತಿಥಿಯಾಗಿದ್ದಾನೆ. ಸದ್ಯಕ್ಕೆ ಪೊಲೀಸರು ಈತನ ಬಾಯಿಂದ ಹಲವಾರು ಸತ್ಯಗಳನ್ನ ಹೊರಹಾಕಿಸಿ ಡ್ರಗ್ಸ್ ಹಾಗೂ ಹವಾಲಾ ಜಾಲವನ್ನು ಬೇರು ಸಮೇತ ಪತ್ತೆಮಾಡಲು ಬಲೆ ಬೀಸಿದ್ದಾರೆ.

ABOUT THE AUTHOR

...view details