ಬೆಂಗಳೂರು :ಮೊದಲ ಬಾರಿಗೆ ಬೆಳಗ್ಗೆಯಿಂದ ಮಧ್ಯಾಹ್ನದವರಗೂ 1 ಲಕ್ಷ ಮನೆಯ ಪ್ರಗತಿ ನೋಡಲು ಹೋಗುತ್ತಿದ್ದೇವೆ. ಅಸಂಘಟಿತ ಕಾರ್ಮಿಕರಿಗೆ ಸೇರಿ ಅನೇಕ ಕುಟುಂಬಗಳಿಗೆ ಮನೆ ನೀಡುತ್ತಿದ್ದೇವೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ರಾಜೀವ್ ಗಾಂಧಿ ವಸತಿ ಯೋಜನೆಯ 2ನೇ ಹಂತದಲ್ಲಿ 54 ಸಾವಿರ ಮನೆ ನಿರ್ಮಾಣ : ವಿ ಸೋಮಣ್ಣ - V Somanna reviewing Rajiv Gandhi Housing Scheme building
ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಕಾಮಗಾರಿ ಸ್ಥಳವನ್ನು ವಸತಿ ಸಚಿವ ವಿ ಸೋಮಣ್ಣ ಪರಿವೀಕ್ಷಣೆ ನಡೆಸಿದರು..
ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಕಾಮಗಾರಿ ಸ್ಥಳ ಪರಿವೀಕ್ಷಣೆ ನಡೆಸಿದರು.
ಪರಿಶೀಲನೆ ನಡೆಸಿ ಮಾತನಾಡಿದ ಅವರು, ಗಾಣಿಗರಹಳ್ಳಿಯಲ್ಲಿ, ಅಗ್ರಹಾರ ಪಾಳ್ಯ, ಪಿಳ್ಳಹಳ್ಳಿ, ಲಕ್ಷ್ಮಿಪುರದಲ್ಲಿ ಮನೆ ನಿರ್ಮಾಣ ಆಗ್ತಿದೆ. ಈಗಾಗಲೇ 4 ವರ್ಷ ತಡವಾಗಿದೆ. ಮುಂದೆ ಹೀಗೆ ಆಗೋದು ಬೇಡ ಎಂದರು.
ನಾನು ಡಿಸೆಂಬರ್ 1 ರಿಂದ 4ರವರೆಗೂ ಬೀದರ್ ಸೇರಿ ಹಲವು ಕಡೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಈಗಾಗಲೇ 48 ಸಾವಿರ ಮನೆ ಮಾಡಲು ಟೆಂಡರ್ ಮಾಡಲಾಗಿದೆ. 4 ವರ್ಷದ ಯೋಜನೆ ಸ್ಥಗಿತಗೊಂಡಿತ್ತು. ಸಿಎಂ ಅವರ ಜೊತೆ ಮಾತನಾಡಿ ಕಾಮಗಾರಿ ವೀಕ್ಷಣೆ ನಡೆಸ್ತಿದ್ದೇವೆ ಎಂದರು.