ಬೆಂಗಳೂರು :ಕುದುರೆ ರೇಸ್ ಮೇಲೆ ಅನಧಿಕೃತವಾಗಿ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನ ಹರೀಶ್, ವಿಕಾಸ್ ಶೆಣೈ ಹಾಗೂ ರಘುನಂದನ್ ಎಂದು ಗುರುತಿಸಲಾಗಿದೆ. ಪರವಾನಿಗೆ ಹೊಂದಿರುವ ರೇಸ್ಕೋರ್ಸ್ಗೆ ಮಾತ್ರವೇ ಕುದುರೆ ರೇಸ್ ಮೇಲೆ ಬೆಟ್ಟಿಂಗ್ ನಡೆಸುವ ಅವಕಾಶವಿದೆ.
ಇದನ್ನೂ ಓದಿ:ಪೊಲೀಸ್ ಠಾಣೆ ಮೆಟ್ಟಿಲೇರಿದ 6ರ ಪೋರ.. ಕಾರಣ ಏನ್ ಗೊತ್ತಾ?
ಆದರೆ, ಸಾಯಿ ಸಾಫ್ಟ್‌ವೇರ್ ಎಂಬ ವೆಬ್‌ಸೈಟ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳು ರೇಸ್ಕೋರ್ಸ್ಗೆ ಸಮಾನವಾಗಿ ಬೆಟ್ಟಿಂಗ್ ನಡೆಸುತ್ತಿದ್ದರು. ಸದ್ಯ ಮೂವರನ್ನೂ ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತರಿಂದ 5.50 ಲಕ್ಷ ರೂ. ಲ್ಯಾಪ್‌ಟಾಪ್ ಹಾಗೂ 10 ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದಿದ್ದಾರೆ.