ಕರ್ನಾಟಕ

karnataka

ETV Bharat / state

ಕಾರಿನಲ್ಲಿ ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜ: ಲೋಪ ಸರಿಪಡಿಸಿ ಗೌರವ ಸಲ್ಲಿಸಿದ ಕೇಂದ್ರ ಸಚಿವ ನಾರಾಯಣಸ್ವಾಮಿ - ಲೋಪ ಸರಿಪಡಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದ ಕೇಂದ್ರ ಸಚಿವ ನಾರಾಯಣ ಸ್ವಾಮಿ

ಕೇಂದ್ರ ಸಚಿವ ನಾರಾಯಣಸ್ವಾಮಿ ಅವರ ಸರ್ಕಾರಿ ಕಾರಿನಲ್ಲಿ ರಾಷ್ಟ್ರಧ್ವಜ ತಲೆಕೆಳಗಾಗಿ ಹಾಕಿ ಎಡವಟ್ಟು ಮಾಡಲಾಗಿದೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಮೊದಲ ಬಾರಿಗೆ ಸಚಿವ ನಾರಾಯಣ ಸ್ವಾಮಿ ಆಗಮಿಸಿದ್ದರು.

union-minister-narayana-swamy-visit-to-bjp-office
ಲೋಪ ಸರಿಪಡಿಸಿ ಗೌರವ ಸಲ್ಲಿಸಿದ ಕೇಂದ್ರ ಸಚಿವ ನಾರಾಯಣಸ್ವಾಮಿ

By

Published : Aug 16, 2021, 6:27 PM IST

ಬೆಂಗಳೂರು:ಕೇಂದ್ರ ಸಮಾಜ ಕಲ್ಯಾಣ ಇಲಾಖೆ ರಾಜ್ಯ ಖಾತೆ ಸಚಿವ ನಾರಾಯಣಸ್ವಾಮಿ ಅವರ ಸರ್ಕಾರಿ ಕಾರಿನಲ್ಲಿ ರಾಷ್ಟ್ರಧ್ವಜ ತಲೆಕೆಳಗಾಗಿ ಹಾಕಿ ಎಡವಟ್ಟು ಮಾಡಲಾಗಿದ್ದು, ಲೋಪವನ್ನು ಸರಿಪಡಿಸಿಕೊಂಡ ಸಚಿವರು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದ್ದಾರೆ.

ಕೇಂದ್ರ ಸಚಿವರಾದ ಬಳಿಕ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಮೊದಲ ಬಾರಿಗೆ ಸಚಿವ ನಾರಾಯಣ ಸರ್ಕಾರಿ ಕಾರಿನ ಬದಲು ಖಾಸಗಿ ಕಾರಿನಲ್ಲಿ ಆಗಮಿಸಿದ್ದರು. ಸಚಿವರ ಸರ್ಕಾರಿ ಕಾರು ಕೂಡ ಖಾಸಗಿ ಕಾರಿನ ಹಿಂದೆಯೇ ಬಿಜೆಪಿ ಕಚೇರಿಗೆ ಆಗಮಿಸಿತು. ಆದರೆ, ಗೂಟದ ಕಾರಿನ ಮುಂಭಾಗದಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗುವಂತೆ ಹಾಕಲಾಗಿತ್ತು.

ಲೋಪ ಸರಿಪಡಿಸಿ ಗೌರವ ಸಲ್ಲಿಸಿದ ಕೇಂದ್ರ ಸಚಿವ ನಾರಾಯಣಸ್ವಾಮಿ

ಕೇಸರಿ, ಬಿಳಿ, ಹಸಿರು ಬದಲಾಗಿ ಹಸಿರು, ಬಿಳಿ, ಕೇಸರಿ ಮಾದರಿಯಲ್ಲಿ ಧ್ವಜ ಹಾರಾಡುತ್ತಿತ್ತು. ಈ ಲೋಪ ಕಂಡುಬರುತ್ತಿದ್ದಂತೆ ಧ್ವಜವನ್ನು ಸರಿಪಡಿಸಿ ಗೌರವ ಸಲ್ಲಿಸಿ ಸರ್ಕಾರಿ ಕಾರಿನಲ್ಲೇ ಸಚಿವ ನಾರಾಯಣಸ್ವಾಮಿ ಬಿಜೆಪಿ ಕಚೇರಿಯಿಂದ ತೆರಳಿದರು.

ಇದನ್ನೂ ಓದಿ:ವಿಮಾನದಿಂದ ಜಾರಿಬಿದ್ದ ಅಫ್ಘಾನ್ ಪ್ರಜೆಗಳು..ಭಯಾನಕ ವಿಡಿಯೋ!

ABOUT THE AUTHOR

...view details