ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಸಿಗರೇಟ್ ಹಾಗೂ ಇನ್ನಿತರ ವ್ಯಸನ ಪದಾರ್ಥಗಳು ಲಭ್ಯತೆ ಕಷ್ಟವಾಗಿದೆ. ಹೀಗಾಗಿ ಇದು ವ್ಯಸನ ಮುಕ್ತರಾಗಲು ಸೂಕ್ತ ಸಮಯ ಎಂದು ಮನೋವೈದ್ಯ ಡಾ. ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಂಬಾಕು ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ವ್ಯಾಸನಿಗಳಿಗೂ ಗೊತ್ತಿರುವ ವಿಷಯ, ಆದರೂ ತಂಬಾಕು ಮತ್ತಿತರ ವ್ಯಸನಗಳನ್ನು ತ್ಯಜಿಸಲು ನಿರಾಕರಿಸುತ್ತಾರೆ. ನಾನು ಕಡಿಮೆ ಸಿಗರೇಟ್ ಸೇದುತ್ತೇನೆ ಅಥವಾ ನನಗೆ ಅಷ್ಟು ವ್ಯಸನವಿಲ್ಲ ಎಂಬ ತಪ್ಪು ಭಾವನೆಯಲ್ಲಿ ಇರುತ್ತಾರೆ. ಹೀಗಾಗಿ ಅವರ ಆರೋಗ್ಯದ ದೃಷ್ಟಿಯಿಂದ ವ್ಯಸನದಿಂದ ಮುಕ್ತಿ ಹೊಂದಲು ಈಗ ಅವುಗಳ ಕೊರತೆ ಉಂಟಾಗಿರುವುದು ಸುವರ್ಣಾವಕಾಶ ಎನ್ನುತ್ತಾರೆ ಮನೋವೈದ್ಯರು.