ಬೆಂಗಳೂರು : ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಉಡುಪಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳು ಮತ್ತು ಕಲಬುರಗಿ ಜಿಲ್ಲೆಯ ಚಿತ್ತಾಪುರ, ಚಿಂಚೋಳಿ ತಾಲೂಕು ನ್ಯಾಯಾಲಯಗಳಿಗೆ ಫಿಸಿಕಲ್ ಕೋರ್ಟ್ ನಡೆಸದಂತೆ ನಿರ್ಬಂಧ ವಿಧಿಸಿದ್ದ ಹೈಕೋರ್ಟ್ ಈ ಆದೇಶವನ್ನು ಜೂನ್ 12ರವರೆಗೆ ವಿಸ್ತರಿಸಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳು ಮತ್ತು ಕಲಬುರಗಿ ಜಿಲ್ಲೆಯ ಚಿತ್ತಾಪುರ, ಚಿಂಚೋಳಿ ತಾಲೂಕು ನ್ಯಾಯಾಲಯಗಳು ಫಿಸಿಕಲ್ ಕೋರ್ಟ್ ನಡೆಸದಂತೆ ಹೈಕೋರ್ಟ್ ಜೂನ್ 4ರಂದು ಆದೇಶಿಸಿತ್ತು. ಈ ಕೋರ್ಟ್ಗಳಲ್ಲಿ ನೇರವಾಗಿ ಅರ್ಜಿ ಸಲ್ಲಿಸಲು, ಕೋರ್ಟ್ ಶುಲ್ಕ ಪಾವತಿಸಲು ಮತ್ತು ವಕೀಲರು ನೇರವಾಗಿ ತೆರಳಿ ವಾದ ಮಂಡಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದೀಗ ಆದೇಶವನ್ನು ಜೂನ್ 12ವರೆಗೆ ವಿಸ್ತರಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿ ಕರ್ ಆದೇಶ ಹೊರಡಿಸಿದ್ದಾರೆ.