ಕರ್ನಾಟಕ

karnataka

ETV Bharat / state

ಲಂಚದ ಹಣ ವಾಪಸ್​ ನೀಡುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಗಳು

ದೂರು ದಾಖಲಾಗಿದ್ದರಿಂದ ಹೆದರಿದ ಅಧಿಕಾರಿಗಳು, ತಾವು ಪಡೆದ ಲಂಚದ ಹಣವನ್ನು ವಾಪಸ್​ ದೂರುದಾರನಿಗೆ ನೀಡುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

By

Published : Sep 22, 2022, 2:05 PM IST

two-officials-arrested-by-lokayukta
ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಗಳು

ಬೆಂಗಳೂರು: ಸಾಮಾನ್ಯವಾಗಿ ಲಂಚ ಪಡೆಯುವಾಗ ಭ್ರಷ್ಟ ಅಧಿಕಾರಿಗಳು ಸಿಕ್ಕಿ ಬೀಳುತ್ತಾರೆ. ಆದರೆ ಈ ಪ್ರಕರಣದಲ್ಲಿ ಲಂಚ ಪಡೆಯುವಾಗ ಸಿಕ್ಕಿಬೀಳದೆ, ಲಂಚದ ಹಣವನ್ನು ವಾಪಸ್​ ಕೊಡುವಾಗ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ–2 ಹುದ್ದೆಯಲ್ಲಿದ್ದ ಕೆಎಎಸ್‌ ಅಧಿಕಾರಿ ಎ.ಬಿ. ವಿಜಯಕುಮಾರ್‌ ಮತ್ತು ಅವರ ಕಚೇರಿಯ ಭೂಮಾಪಕ ರಘುನಾಥ್‌ ಬಂಧಿತ ಆರೋಪಿಗಳಾಗಿದ್ದಾರೆ. ವ್ಯಕ್ತಿಯೊಬ್ಬರ ಜಮೀನು ಸ್ವಾಧೀನಪಡಿಸಿಕೊಂಡಿಲ್ಲ‌ ಎಂದು ನಿರಾಕ್ಷೇಪಣಾ ಪತ್ರ (ಎನ್ಓಸಿ) ಪತ್ರ ನೀಡಲು 2.5 ಲಂಚ ಪಡೆದಿದ್ದರು ಎನ್ನಲಾಗ್ತಿದೆ.

ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭವಾಗುತ್ತಿದ್ದಂತೆ ಭಯಗೊಂಡ ಈ ಇಬ್ಬರೂ ಆರೋಪಿಗಳು ದೂರುದಾರರನ್ನು ಸಂಪರ್ಕಿಸಿ ಅದನ್ನು ಹಿಂಪಡೆದರೆ 2.5 ಲಕ್ಷದ ಹಣದ ಜೊತೆಗೆ ಹೆಚ್ಚುವರಿಯಾಗಿ 50 ಸಾವಿರ ಹಣ ನೀಡುವುದಾಗಿ ಹೇಳಿದ್ದರು. ಈ ಸಂಬಂಧ ಲಂಚದ ಹಣ ನೀಡುವಾಗಲೇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಲೋಕಾಯುಕ್ತ ಮಹತ್ವದ ತೀರ್ಪು; ನಿವೃತ್ತ ಸಾರಿಗೆ‌ ಅಧಿಕಾರಿಗೆ ನಾಲ್ಕು ವರ್ಷ ಶಿಕ್ಷೆ, 63 ಲಕ್ಷ ರೂ ದಂಡ

ABOUT THE AUTHOR

...view details