ಬೆಂಗಳೂರು:ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿ ರಾತ್ರೋ ರಾತ್ರಿ ದೇವರ ಮೇಲಿರುವ ವಿಗ್ರಹಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಬೊಮ್ಮನಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ದೇವಸ್ಥಾನಗಳಲ್ಲಿ ಕಳ್ಳತನ ಮಾಡ್ತಿದ್ದ ಇಬ್ಬರು ಖದೀಮರ ಬಂಧನ
ದೇವಸ್ಥಾನಗಳಲ್ಲಿ ಕಳ್ಳತನ ಮಾಡ್ತಿದ್ದ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಗುರಪ್ಪನಪಾಳ್ಯದ ನಿವಾಸಿಗಳಾದ ಮೊಹಮ್ಮದ್ ಇಫಾರ್ನ್ ಹಾಗೂ ಸಲ್ಮಾನ್ ಬಂಧಿತ ಆರೋಪಿಗಳು. ಬಂಧಿತರಿಂದ 3.5 ಲಕ್ಷ ರೂ. ಮೌಲ್ಯದ 4 ಕೆಜಿ ತೂಕದ 2 ಬೆಳ್ಳಿಯ ಕೀರಿಟಗಳು, ಬೆಳ್ಳಿಯ ಹಸ್ತ, 2 ಬೆಳ್ಳಿಯ ಪಾದಗಳು, ಎರಡು ಚಿನ್ನ ಲೇಪಿತ ನಕ್ಲೇಸ್ ಹಾಗೂ 11 ಸಾವಿರ ನಗದು ಜಪ್ತಿ ಮಾಡಿಕೊಂಡಿದ್ದಾರೆ.
ಹಣ ಸಂಪಾದನೆಗಾಗಿ ಅಕ್ರಮ ಮಾರ್ಗ ತುಳಿದ ಆರೋಪಿಗಳು ದೇವಸ್ಥಾನಗಳಲ್ಲಿ ಚಿನ್ನ ಕದಿಯಲು ಸಂಚು ರೂಪಿಸಿದ್ದರು. ಇದರಂತೆ ರಾತ್ರಿ ವೇಳೆ ಬೊಮ್ಮನಹಳ್ಳಿ, ಸುದ್ದುಗುಂಟೆಪಾಳ್ಯ, ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಕಳತನ ಮಾಡುತ್ತಿದ್ದರು. ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.