ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಅಫೀಮು ಮಾರಾಟಗಾರರ ಬಂಧನ: 20 ಲಕ್ಷ ಮೌಲ್ಯದ ಮಾಲು ವಶ - ಡ್ರಗ್ ಪೆಡ್ಲರ್ ಬಂಧನ

ಮಾದಕವಸ್ತುಗಳ ಮಾರಾಟ, ಖರೀದಿ, ಸಾಗಾಣಿಕೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣಾ ಪೋಲಿಸರು ಬಂಧಿಸಿದ್ದಾರೆ.

two arrested for selling opium in bengaluru
two arrested for selling opium in bengaluru

By

Published : Jul 29, 2021, 7:22 PM IST

ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಮಾದಕ‌‌ ವಸ್ತುಗಳ ಮಾರಾಟದ ಹಾವಳಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದ್ರಲ್ಲೂ ಹೊರ ರಾಜ್ಯ ಹಾಗೂ ಹೊರ ದೇಶದಿಂದ ಅತಿ ಹೆಚ್ಚು ಮಾದಕ‌ ವಸ್ತುಗಳನ್ನ ಪೆಡ್ಲರ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಐಟಿ ಉದ್ಯಮಿಗಳಿಗೆ ಮಾರಾಟ ಮಾಡಲಾಗುತ್ತಿದೆ.

ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಕಾರ್ಯಚರಣೆ ನಡೆಸಿ ಮಾದಕವಸ್ತುಗಳ ಮಾರಾಟ, ಖರೀದಿ, ಸಾಗಾಣಿಕೆ ಅಕ್ರಮ ಕಾರ್ಯಗಳಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಟೀಕಮ್‌ರಾಮ್ ಹಾಗೂ ತಾರಾರಾಮ್ ಎಂಬಿಬ್ಬರು ಎಲೆಕ್ಟ್ರಾನಿಕ್‌ ಸಿಟಿ ರೆಸ್ಟೋರೆಂಟ್ ಮುಂಭಾಗ ದ್ವಿಚಕ್ರ ವಾಹನದಲ್ಲಿ ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಗಳಿಗೆ ಮಾದಕವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಮೂಲತಃ ರಾಜಸ್ಥಾನದವರಾಗಿದ್ದು, ಹೊರ ರಾಜ್ಯದಿಂದ ಬಂದು ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದರು.

ಆರೋಪಿಗಳಿಂದ ಒಂದು ದ್ವಿಚಕ್ರ ವಾಹನ ಮತ್ತು ಸುಮಾರು 20 ಲಕ್ಷ ರೂ. ಬೆಲೆಬಾಳುವ 1 ಕೆ.ಜಿ ತೂಕದ ಅಫೀಮು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿಚಾರಣೆ ನಡೆಸಿದಾಗ ಆಫೀಮನ್ನು ರಾಜಸ್ತಾನದ ಅಪರಿಚಿತ ವ್ಯಕ್ತಿಯಿಂದ ಖರೀದಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಕೊಂಡಿರುವ ಪೊಲೀಸರು, ಅಫೀಮು ಮಾರಾಟ ಮಾಡಿದ ಅಪರಿಚಿತ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ABOUT THE AUTHOR

...view details