ಬೆಂಗಳೂರು: ಟೆಕ್ಕಿಗಳನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ಟೀಫನ್ ಜಾನ್ಸ್, ರಾಘವೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ. ಶೇರ್ ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿ ಲಾಭ ಮಾಡಿಕೊಡುವುದಾಗಿ ಎಂಜಿನಿಯರ್ಗಳನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಸತೀಶ್ ಎಂಬುವರು ಚಂದ್ರ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಎಫ್ಐಆರ್ ದಾಖಲಾಗಿದೆ. ಎ1 ಆರೋಪಿ ರಾಘವೇಂದ್ರ ಹಾಗೂ ಜಾನ್ಸ್ ಬೇರೆ ಬೇರೆ ಕಂಪನಿ ನಡೆಸುತ್ತಿದ್ದರು. ರಾಘವೇಂದ್ರ ಸಿಸ್ಟಮೆಟಿಕ್ ವೆಲ್ತ್ ಮಲ್ಟಿ ಪ್ಲೇಯರ್ ಕಂಪನಿ ಹಾಗೂ ಜಾನ್, ಜಾನ್ ವೆಲ್ತ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರು. ಇವರದ್ದೇ ಕಂಪನಿ ಮೇಲೆ ಹಣ ಹೂಡುವಂತೆ ಸತೀಶ್ಗೆ ತಿಳಿಸಿದ್ದಾರೆ.
ಆದರೆ ಹಣ ಇಲ್ಲ ಎಂದಾಗ ಇವರೇ ಬ್ಯಾಂಕ್ನಿಂದ ಲೋನ್ ಕೂಡ ಕೊಡಿಸಿದ್ದಾರೆ. 1 ಕೋಟಿ 60 ಲಕ್ಷ ಸಾಲ ಕೊಡಿಸಿ, ತಮ್ಮ ಅಕೌಂಟ್ಗೆ ಹಾಕಿಸಿಕೊಂಡಿದ್ದಾರೆ. ಇದಾದ ಬಳಿಕ ಕೆಲ ಕಾಲ ಲಾಭಾಂಶವೆಂದು ಸ್ವಲ್ಪ ಹಣ ನೀಡಿದ್ದಾರೆ. ಬಳಿಕ ಸತೀಶ್ಗೆ ಹಣ ನೀಡುವುದನ್ನು ನಿಲ್ಲಿಸಿದ್ದಾರೆ.