ಬೆಂಗಳೂರು: ಕ್ರಿಸ್‌ಮಸ್ ಹಬ್ಬದ ಸಂಭ್ರಮದ ನಡುವೆ ಹದಗೆಡುತ್ತಿರುವ ಸಾಂಕ್ರಾಮಿಕ ರೋಗದ ಭಯದಿಂದಿರುವ ಜನರ ಉತ್ಸಾಹವನ್ನು ಹೆಚ್ಚಿಸುವ ಉದ್ದೇಶದಿಂದ, ಬೆಂಗಳೂರು ಈಸ್ಟ್ ಮಾರ್ ಥೋಮಾ ಚರ್ಚ್ ತನ್ನ ಯುವ ವಿಭಾಗದ ಸಹಯೋಗದೊಂದಿಗೆ ‘ಕೋವಿಡ್ -19 ನಡುವೆ ಹೋಪ್’ ಎಂಬ ವಿಷಯದ ಆಧಾರದ ಮೇಲೆ ಕ್ರಿಸ್‌ಮಸ್ ಹಬ್ಬವನ್ನು ಆಚರಿಸುತ್ತಿದೆ.
ಈ ವಿಭಿನ್ನವಾದ ಆಚರಣೆಯನ್ನ ಕೊರೊನಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಕೊರೊನಾ ವಾರಿಯರ್ಸ್‌ಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಆಚರಿಸಿದ್ದಾರೆ. ಕೊರೊನಾ, ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಹೀಗೆ ಹಲವು ವಿಷಯಗಳನ್ನ ಗಮನದಲ್ಲಿಟ್ಟುಕೊಂಡು ಯುವ ವಿಭಾಗದ ಸ್ವಯಂಸೇವಕರು, ದೊಡ್ಡ ಬಾನಸವಾಡಿರಲ್ಲಿರುವ ಬೆಂಗಳೂರು ಈಸ್ಟ್ ಮಾರ್ ಥೋಮ ಚರ್ಚ್ ಆವರಣದಲ್ಲಿ ಯೇಸು ಜನಿಸಿದ ಕೊಟ್ಟಿಗೆಯ ಮಾದರಿಯ ಗೋದಲಿ ನಿರ್ಮಿಸಿದ್ದಾರೆ.
ಕೊರೊನಾ ವಾರಿಯರ್ಸ್‌ಗೆ ನಮನ ಸಲ್ಲಿಸುವ ಗೋದಲಿ ಸಾಂಕ್ರಾಮಿಕ ರೋಗ ಹರಡಿದಾಗಿನಿಂದ, ಕಾರ್ಯನಿರ್ವಹಿಸಿರುವ ಸ್ಥಳಗಳು ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗಳು ಮಾತ್ರ. ಸಾಂಕ್ರಾಮಿಕ ರೋಗದಿಂದಾಗಿ ಉಳಿದ ಬಹುತೇಕ ಶಾಲಾ - ಕಾಲೇಜು, ಮಾಲ್ - ಚಿತ್ರಮಂದಿರಗಳು, ಕಂಪನಿಗಳು, ಇಂಡಸ್ಟ್ರಿಗಳನ್ನ ಮುಚ್ಚಲಾಗಿತ್ತು. ಇಂತಹ ಕಷ್ಟದ ಸಮಯದಲ್ಲಿ ನಿಸ್ವಾರ್ಥದಿಂದ ಪೋಲಿಸರು ಮತ್ತು ಆಸ್ಪತ್ರೆ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದರು.
ಏಸು ಜನಿಸಿದಾಗ ಏಸುವಿನ ಪಕ್ಕದಲ್ಲಿ ತಂದೆ ಜೋಸೆಫ್, ತಾಯಿ ಮೇರಿ ಸುತ್ತಲು ದೇವಾನು ದೇವತೆಗಳು, ಕುರುಬರು ಎಲ್ಲರೂ ಇರುತ್ತಾರೆ. ಆದ್ರೆ ಯುವಜನ ಸಖ್ಯಮ್ ಸೇವಕರು, ಹಸುಳೆ ಏಸು ಜೊತೆ ತಂದೆ ತಾಯಂದಿರ ಜೊತೆ ವೈದ್ಯರು ಹಾಗೂ ಪೋಲಿಸರನ್ನ ದೇವತೆಗಳ ಹಾಗೆ ಪ್ರತಿಬಿಂಬಿಸಿದ್ದಾರೆ. ಮಗು ಜನಿಸಿದಾಗ ನರ್ಸ್‌ಗಳು, ವೈದ್ಯರು ಕಾರ್ಯ ನಿರ್ವಹಿಸುತ್ತಾರೆ. ಅವರನ್ನೇ ದೇವದೂತರನ್ನಾಗಿ ಪ್ರದರ್ಶಸಿದ್ದಾರೆ.