ಕರ್ನಾಟಕ

karnataka

ETV Bharat / state

ನೆರೆ ರಾಜ್ಯಗಳಿಂದ ಗ್ರೀನ್‌ ಸಿಗ್ನಲ್ ಸಿಕ್ಕರೆ ಬಸ್ ಸಂಚಾರಕ್ಕೆ ಸಿದ್ಧ: ಸಾರಿಗೆ ಸಚಿವ ಸವದಿ

ನೆರೆ ರಾಜ್ಯಗಳಿಂದ ಗ್ರೀನ್‌ ಸಿಗ್ನಲ್ ಸಿಕ್ಕರೆ ಬಸ್ ಸಂಚಾರ ಆರಂಭಕ್ಕೆ ಯಾವುದೇ ಅಡೆತಡೆ ಇಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಹೇಳಿದ್ದಾರೆ

interstate Bus traffic start, interstate Bus traffic start news, DCM Laxman savadi talk about interstate Bus traffic start,  DCM Laxman savadi,  DCM Laxman savadi news, Transport minister, Transport minister news, ಬಸ್ ಸಂಚಾರ ಆರಂಭ, ಬಸ್ ಸಂಚಾರ ಆರಂಭದ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ, ಡಿಸಿಎಂ ಲಕ್ಷ್ಮಣ ಸವದಿ, ಡಿಸಿಎಂ ಲಕ್ಷ್ಮಣ ಸವದಿ ಸುದ್ದಿ, ಸಾರಿಗೆ ಸಚಿವ, ಸಾರಿಗೆ ಸಚಿವ ಸುದ್ದಿ, ಬಸ್​ ಸಂಚಾರ ಆರಂಭ ಸುದ್ದಿ,
ನೆರೆ ರಾಜ್ಯಗಳಿಂದ ಗ್ರೀನ್‌ ಸಿಗ್ನಲ್ ಸಿಕ್ಕರೆ ಬಸ್ ಸಂಚಾರ ಆರಂಭಕ್ಕೆ ನೋ ಪ್ರಾಬ್ಲಂ

By

Published : Aug 25, 2020, 4:42 PM IST

Updated : Aug 25, 2020, 5:01 PM IST

ಬೆಂಗಳೂರು: ದೇಶಾದ್ಯಂತ ಈಗ ಲಾಕ್‍ಡೌನ್ ಸಡಿಲಗೊಳಿಸಿರುವುದರಿಂದ ನಮ್ಮ ರಾಜ್ಯದಿಂದ ಇತರ ರಾಜ್ಯಗಳಿಗೆ ಅದರಲ್ಲೂ ಮುಖ್ಯವಾಗಿ ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ರಾಜ್ಯಗಳಿಗೆ ಪುನಃ ಬಸ್ ಸಂಚಾರ ಪ್ರಾರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸಜ್ಜಾಗಿವೆ.

ಆದರೆ, ಪಕ್ಕದ ಈ ಎಲ್ಲ ರಾಜ್ಯಗಳಿಂದ ಇದಕ್ಕೆ ಹಸಿರು ನಿಶಾನೆ ದೊರೆಯಬೇಕಿದೆ. ನಂತರ ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ಸಂಚಾರ ಪ್ರಾರಂಭಿಸಲಾಗುವುದು ಅಂತ ಡಿಸಿಎಂ ಲಕ್ಷ್ಮಣ ಸವದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಸ್ಥಿತಿ ಸುಧಾರಣೆಗೊಂಡ ನಂತರ ಈಗಾಗಲೇ ಆಂಧ್ರ ಪ್ರದೇಶಕ್ಕೆ ಕರ್ನಾಟಕದಿಂದ ಸರ್ಕಾರಿ ಸಾರಿಗೆ ಬಸ್‍ಗಳ ಸಂಚಾರವನ್ನು ಪ್ರಾರಂಭಿಸಲಾಗಿದೆ. ಸಾರ್ವಜನಿಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ರಾಜ್ಯಗಳಿಗೆ ಬಸ್ ಸಂಚಾರ ಪ್ರಾರಂಭಿಸುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಕೋರಿ ಸಾರಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೆ, ಆಯಾ ಸಾರಿಗೆ ಸಂಸ್ಥೆಗಳಲ್ಲಿ ಇದಕ್ಕೆ ಅಗತ್ಯವಾದ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಈ ಎಲ್ಲ ರಾಜ್ಯಗಳಿಂದ ಶೀಘ್ರವೇ ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆಯಬಹುದು ಎಂಬ ನಿರೀಕ್ಷೆಯೂ ಇದೆ. ಹೀಗೆ ಆಯಾ ರಾಜ್ಯಗಳಿಂದ ವ್ಯಕ್ತವಾಗುವ ಪ್ರತಿಕ್ರಿಯೆಗಳನ್ನು ಆಧರಿಸಿ ಪುನಃ ಬಸ್ ಸಂಚಾರ ಪ್ರಾರಂಭಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದರು.

ಲಾಕ್‍ಡೌನ್‍ಗಿಂತ ಮುಂಚೆ ರಾಜ್ಯದಿಂದ ಒಟ್ಟು 2,500 ಸರ್ಕಾರಿ ಬಸ್‍ಗಳು ನೆರೆಯ ರಾಜ್ಯಗಳಿಗೆ ಸಂಚರಿಸುತ್ತಿದ್ದವು. ಈ ಹಿನ್ನೆಲೆ ಮುಂಚಿನಂತೆ ಮತ್ತೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಅಂತ ತಿಳಿಸಿದ್ದಾರೆ.

Last Updated : Aug 25, 2020, 5:01 PM IST

ABOUT THE AUTHOR

...view details