ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ಮಾಡುವ ಬೂತ್ಗಳಲ್ಲಿ ಕೆಲಸ ಮಾಡುವ ಪೋಲಿಂಗ್ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ಪೋಲಿಂಗ್ ಅಧಿಕಾರಿಗಳಿಗೆ ಬೂತ್ಗಳ ಬಗ್ಗೆ ತರಬೇತಿ - ಪೋಲಿಂಗ್
ಮತದಾರರಿಗೆ ಸುಲಭವಾಗುವಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅನ್ನೋದನ್ನು ಈ ತರಬೇತಿಯಲ್ಲಿ ಪೋಲಿಂಗ್ ಅಧಿಕಾರಿಗಳಿಗೆ ತಿಳಿಸಲಾಯ್ತು.
ಬೂತ್ಗಳ ಬಗ್ಗೆ ತರಬೇತಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್ಗಳ ಪೋಲಿಂಗ್ ಅಧಿಕಾರಿಗಳಿಗೆ ಚುನಾವಣಾ ಅಧಿಕಾರಿಗಳು ತರಬೇತಿ ನೀಡಿದರು. ವಿವಿ ಪ್ಯಾಡ್ ಮತ್ತು ಇವಿಎಂಗಳ ಬಳಕೆ ಯಾವ ರೀತಿ ಮಾಡಬೇಕು ಎಂಬ ಬಗ್ಗೆ ವಿವರಣೆ ನೀಡಿದರು.
ಮತದಾರರಿಗೆ ಸುಲಭವಾಗುವಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅನ್ನೋದನ್ನು ಈ ತರಬೇತಿಯಲ್ಲಿ ಪೋಲಿಂಗ್ ಅಧಿಕಾರಿಗಳಿಗೆ ತಿಳಿಸಲಾಯ್ತು.