ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ನೈಸ್ ರಸ್ತೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿವೆ. ಈ ಹಿನ್ನೆಲೆ, ಇಲ್ಲಿ ರಾತ್ರಿ ವೇಳೆ ಬೈಕ್ ಚಾಲನೆಯನ್ನ ನಗರ ಸಂಚಾರ ಪೊಲೀಸರು ನಿಷೇಧಿಸಿದ್ದರು. ಆದಾಗ್ಯೂ ಅಪಘಾತಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ಟ್ರಾಫಿಕ್ ಪೊಲೀಸರು ಕೈಗೊಂಡಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಒಂದೇ ದಿನ 126 ಪ್ರಕರಣ ದಾಖಲಿಸಿ, 1.27 ಲಕ್ಷ ದಂಡ ವಸೂಲಿ ಮಾಡಿದ್ದಾರೆ.
ನೈಸ್ ರಸ್ತೆಯಲ್ಲಿ ಸಂಚಾರಿ ಪೊಲೀಸರ ಸ್ಪೆಷಲ್ ಡ್ರೈವ್: ಒಂದೇ ದಿನ 126 ಕೇಸ್
ನೈಸ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ಟ್ರಾಫಿಕ್ ಪೊಲೀಸರು ಕೈಗೊಂಡಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಒಂದೇ ದಿನ 126 ಪ್ರಕರಣ ದಾಖಲಿಸಿ, 1.27 ಲಕ್ಷ ದಂಡ ವಸೂಲಿ ಮಾಡಿದ್ದಾರೆ.
ನೈಸ್ ರಸ್ತೆಯಲ್ಲಿ ಸಂಚಾರಿ ಪೊಲೀಸರ ಸ್ಪೆಷಲ್ ಡ್ರೈವ್
ನೈಸ್ ಮುಖ್ಯರಸ್ತೆಯ ಕನಕಪುರ ರಸ್ತೆಯ ಟೋಲ್ ಸಮೀಪ ಅತಿವೇಗದ ಚಾಲನೆಯಿಂದ ಮಾರಣಾಂತಿಕ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಅತಿವೇಗದ ಚಾಲನೆ ನಿಯಂತ್ರಣ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯ ಇನ್ಸ್ಪೆಕ್ಟೆರ್ ವೆಂಕಟೇಶ್ ನೇತೃತ್ವದಲ್ಲಿ ಎಎಸ್ಐ ಜಿ.ಎನ್.ನಾಗರಾಜು ತಂಡವು ಸಂಚಾರ ಅರಿವಿನ ಜೊತೆಗೆ, ಅತಿವೇಗವಾಗಿ ಚಾಲನೆ ಮಾಡಿದ ಚಾಲಕರ ವಿರುದ್ಧ ಒಂದೇ ದಿನದಲ್ಲಿ 126 ಪ್ರಕರಣಗಳನ್ನು ದಾಖಲಿಸಿ 1.27 ಲಕ್ಷ ದಂಡ ವಸೂಲಿ ಮಾಡಿದ್ದಾರೆ.
ಇದನ್ನೂ ಓದಿ :ಒಂದೇ ರಾತ್ರಿ 50ಕ್ಕೂ ಹೆಚ್ಚು ಕೊಳವೆ ಬಾವಿಗಳ ಕೇಬಲ್ ಪ್ಯಾನಲ್ ಬೋರ್ಡ್ ಕಳವು