ಬೆಂಗಳೂರು:ಗುಂಡಿಮುಕ್ತ ಬೆಂಗಳೂರು ಕನಸು ಕನಸಾಗಿಯೇ ಉಳಿದಿದೆ. ಒಂದು ಮಳೆ ಬಂದ್ರೇ ಕಳಪೆ ಕಾಮಗಾರಿಯಿಂದಾಗಿಸಾಕು ರಸ್ತೆಗಳೆಲ್ಲಬಾಯಿಬಿಡುತ್ತಿವೆ. ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರರು ಸಾಯೋದನ್ನ ಕಣ್ಣಾರೆ ಕಾಣ್ತಿದ್ದ ಟ್ರಾಫಿಕ್ ಪೊಲೀಸರೆ, ಗುಂಡಿ ಮುಕ್ತ ಮಾಡಲು ಮುಂದಾಗಿದ್ದರು.
ಸಿಲಿಕಾನ್ ಸಿಟಿಯಲ್ಲಿರುವ ಗುಂಡಿಗಳೆಷ್ಟು.. ಖಾಕಿ ರಿಪೋರ್ಟ್ ಹಿಡಿದು ಬೀದಿಗಿಳಿದ ಬಿಬಿಎಂಪಿ ಆಯುಕ್ತರು!
ಬೆಂಗಳೂರಿನಲ್ಲಿರುವ ಸುಮಾರು 450 ಗುಂಡಿಗಳ ಪೋಟೋ ಮತ್ತು ವಿಳಾಸವನ್ನು ಪಟ್ಟಿ ಮಾಡಿ ಟ್ರಾಫಿಕ್ ಪೊಲೀಸರು ಬಿಬಿಎಂಪಿಗೆ ಕೊಟ್ಟಿದ್ದರು. ಪೊಲೀಸರ ವರದಿ ಹಿಡ್ಕೊಂಡು ಬೆಂಗಳೂರು ನಗರವನ್ನು ಆಯುಕ್ತ ಮಂಜುನಾಥ್ ಪ್ರಸಾದ್ ಸುತ್ತು ಹಾಕಿದರು.
ಈ ಘಟನೆಯಿಂದ ಮುಜುಗರಕ್ಕೊಳಗಾದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ರಸ್ತೆ, ಮೂಲಸೌಕರ್ಯದ ಮುಖ್ಯ ಇಂಜಿನಿಯರ್ ಸೋಮಶೇಖರ್ ಹಾಗೂ ಅಧಿಕಾರಿಗಳು ದಿಢೀರ್ ರಸ್ತೆಗಳಿದು ಪರಿಶೀಲನೆ ನಡೆಸಿ ಗುಂಡಿಗಳನ್ನು ಹುಡುಕಿದ್ರು.
ಪೊಲೀಸರ ವರದಿ ಹಿಡ್ಕೊಂಡು ಬೆಂಗಳೂರು ನಗರವನ್ನು ಸುತ್ತು ಹಾಕಿದರು. ಟ್ರಾಫಿಕ್ ಪೊಲೀಸರು ಬಿಬಿಎಂಪಿಗೆ ನಗರದಲ್ಲಿರೋ ಸುಮಾರು 450 ಗುಂಡಿಗಳ ಪೋಟೋ ಮತ್ತು ವಿಳಾಸವನ್ನ ಪಟ್ಟಿ ಮಾಡಿಕೊಟ್ಟಿದ್ದರು. ಆಯುಕ್ತ ಮಂಜುನಾಥ್ ಪ್ರಸಾದ್ ಇಂದು ಬೆಳಗ್ಗೆ ಸ್ಥಳ ಪರಿಶೀಲನೆ ಮಾಡೋ ವೇಳೆಗಾಗಲೇ ಸ್ವತಃ ಟ್ರಾಫಿಕ್ ಪೊಲೀಸರೇ ಲಾರಿ ಟ್ರ್ಯಾಕ್ಟರ್ ತರಿಸಿ ಸಿಮೆಂಟ್ ಹಾಕಿ ಗುಂಡಿ ಮುಚ್ಚಿದ್ದಾರೆ. ನಗರದ ಪ್ರಮುಖ ರಸ್ತೆಗಳ ಗುಂಡಿ ಮುಚ್ಚಿಸಲಾಗ್ತಿದೆ, ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ರು.