ಬೆಂಗಳೂರು: ರಾಜಾಜಿನಗರ ರಾಜ್ ಕುಮಾರ್ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನು ಸಂಚಾರ ಪೊಲೀಸರು ಹೊತ್ತೊಯ್ಯುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಕೆಲಕಾಲ ಪೊಲೀಸರ ವಿರುದ್ದ ಕಿಡಿಕಾರಿದ ಪ್ರಸಂಗ ನಡೆಯಿತು.
ರಾಜ್ ಕುಮಾರ್ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಬೈಕ್ಗಳನ್ನು ಸಂಚಾರ ಪೊಲೀಸರು ಟೊ ಮಾಡಲು ಮುಂದಾದರು. ಈ ವೇಳೆ ಅಲ್ಲೇ ಬೈಕ್ ಸವಾರರು ಇದು ಪಾರ್ಕಿಂಗ್ ಪ್ರದೇಶ. ಯಾಕೆ ಬೈಕ್ ಟೊ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಅಲ್ಲದೆ ಟೊಯಿಂಗ್ ಮಾಡುವ ಕುಡಿದ ಆಮಲಿನಲ್ಲಿ ಅಕ್ರೋಶ ವ್ಯಕ್ತಪಡಿಸಿದರು.
ರಾಜ್ ಕುಮಾರ್ ರೋಡ್ನಲ್ಲಿ ಸಂಚಾರ ದಟ್ಟಣೆ ನೋಡ ನೋಡುತ್ತಿದ್ದಂತೆ ಸಾರ್ವಜನಿಕರು ನಡುರಸ್ತೆಯಲ್ಲೇ ನಿಂತು ಪೊಲೀಸರ ವಿರುದ್ಧ ಕೆಂಡಕಾರಿದರು. ಇದರಿಂದ ಕೆಲವು ಗಂಟೆಗಳ ಕಾಲ ರಾಜಕುಮಾರ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಪರಿಸ್ಥಿತಿ ಹದಗೆಡುತ್ತಿದ್ದಂತೆ ವಿಷಯ ತಿಳಿದು ರಾಜಾಜಿನಗರ ಕಾನೂನು ಸುವ್ಯವಸ್ಥೆ ಪೊಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ವೇಳೆ ಸ್ಥಳಕ್ಕೆ ಬಂದ ಸಂಚಾರಿ ವಿಭಾಗದ ಡಿಸಿಪಿ ಸುಮಲತಾ, ಟೋಯಿಂಗ್ ಮಾಡುತ್ತಿದ್ದ ಟ್ರಾಫಿಕ್ ಪೊಲೀಸರನ್ನ ಪರೀಕ್ಷೆ ಮಾಡಲಾಗಿದೆ. ಯಾವುದೇ ರೀತಿಯ ಮಧ್ಯ ಸೇವೆಯನ್ನ ಮಾಡಿರಲಿಲ್ಲ.ಪ್ರತಿ ದಿನ ಪಾರ್ಕಿಂಗ್ ಮಾಡುವ ರಸ್ತೆ ಬದಲಾವಣೆಯಾಗಲಿದೆ. ಇಂದು ಪಾರ್ಕಿಂಗ್ ಪಕ್ಕದ ರಸ್ತೆಯಲ್ಲಿ ಇತ್ತು. ಶುಕ್ರವಾರ ಈ ರಸ್ತೆ ಪಾರ್ಕಿಂಗ್ ಇತ್ತು. ಇವತ್ತು ಪಕ್ಕದ ರಸ್ತೆಯಲ್ಲಿ ಪಾರ್ಕಿಂಗ್ ಇದೆ. ಇದನ್ನು ತಿಳಿಯದೆ ಸಾರ್ವಜನಿಕರು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.