ಕರ್ನಾಟಕ

karnataka

ETV Bharat / state

ಸೈಬರ್‌ ಕುಟೀಲರ ಕಾಟದಿಂದ ಎಚ್ಚರದಿಂದಿರಿ: ನಿಮಗೆ ತಿಳಿದಿರಬೇಕಾದ ಸಂಗತಿಗಳು ಇಲ್ಲಿವೆ ನೋಡಿ..

ನಗರದಲ್ಲಿ ಪ್ರತಿವರ್ಷ 12 ವಿಧದ ಸೈಬರ್ ಕೃತ್ಯಗಳು ನಡೆಯುತ್ತಿವೆ. ಸೈಬರ್ ಕೃತ್ಯಗಳು ಹೇಗೆ ನಡೆಯುತ್ತವೆ ಎಂಬುದರ ಬಗ್ಗೆ ಸಿಸಿಬಿ ಡಿಸಿಪಿ ಕುಲ್‌ದೀಪ್ ಜೈನ್ ಅವರು ಈಟಿವಿ ಭಾರತಕ್ಕೆ ವಿವರವಾದ ಮಾಹಿತಿ ನೀಡಿದ್ದಾರೆ.

Number of Cyber crime in State
ಸಿಸಿಬಿ ಡಿಸಿಪಿ ಕುಲ್ ದೀಪ್ ಜೈನ್

By

Published : Jun 18, 2020, 10:38 PM IST

Updated : Jun 19, 2020, 1:34 PM IST

ಬೆಂಗಳೂರು:ಪರಿಸ್ಥಿತಿಗೆ ಅನುಗುಣವಾಗಿ ಸೈಬರ್ ಅಪರಾಧಗಳು ನಡೆಯುತ್ತಿವೆ ಎಂಬುದನ್ನು ಬೆಂಗಳೂರು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.

ಕೊರೊನಾದಿಂದ ತಪ್ಪಿದ ಸೈಬರ್​ ವಂಚನೆಗಳು: ಸೈಬರ್ ಕುಟೀಲರ ಕಾಟ ಹೀಗಿವೆ..

ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಪ್ರಕರಣಗಳ ವಿವರ:

  • ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಪ್ರಕರಣ: 2017ರಲ್ಲಿ 1,500, 2018ರಲ್ಲಿ 2,643, 2019ರಲ್ಲಿ 4,206 ಮತ್ತು 2020ರಲ್ಲಿ 1,032 ಸೇರಿದಂತೆ ಒಟ್ಟು 9,381 ಪ್ರಕರಣ ದಾಖಲು
  • ಕೆಲಸ ಕೊಡಿಸುವುದಾಗಿ ಆನ್​ಲೈನ್ ವಂಚನೆ:2017-172, 2018- 382, 2019-498 ಮತ್ತು 2020-117 ಸೇರಿದಂತೆ ಒಟ್ಟು 1,169 ಪ್ರಕರಣ ದಾಖಲು
  • ಕಾರ್ಡ್ ಸ್ಕಿಮ್ಮಿಂಗ್: 2017- 395, 2018- 663, 2019- 2438, 2020- 281 ಸೇರಿದಂತೆ ಒಟ್ಟು 3,777 ಪ್ರಕರಣಗಳು ದಾಖಲು
  • ಮ್ಯಾಟ್ರಿಮೊನಿಯಲ್ ವಂಚನೆ: 2017- 20, 2018- 45, 2019- 80 ಮತ್ತು 2020- 22 ಸೇರಿದಂತೆ ಒಟ್ಟು 167 ಪ್ರಕರಣ ದಾಖಲು
  • ವ್ಯವಹಾರದ ಹೆಸರಲ್ಲಿ ದತ್ತಾಂಶ ಕಳ್ಳತನ: 2017- 60, 2018- 68, 2019- 143 , 2020- 65 ಸೇರಿದಂತೆ ಒಟ್ಟು ಪ್ರಕರಣ ಸಂಖ್ಯೆ 336
  • ಉಡುಗೊರೆ, ಐಫೋನ್, ಒಎಲ್​ಎಕ್ಸ್ ಸಂಬಂಧಿತ ಪ್ರಕರಣಗಳು:2017-290, 2018-945, 2019-2099 ಮತ್ತು 2020- 669 ಸೇರಿ ಒಟ್ಟು 4,003 ಪ್ರಕರಣ ದಾಖಲು
  • ಲಾಟರಿ ವಂಚನೆ:2017- 53, 2018- 53, 2019- 87 ಮತ್ತು 2020- 30 ಸೇರಿ ಒಟ್ಟು 223 ಪ್ರಕರಣಗಳು ದಾಖಲಾಗಿವೆ.
  • ಸಿಮ್ ಹೆಸರಲ್ಲಿ ವಂಚನೆ: 2017- 7, 2018- 5, 2019-1 ಮತ್ತು 2020- 2 ಸೇರಿ ಒಟ್ಟು 15 ಪ್ರಕರಣ ದಾಖಲಾಗಿವೆ.
  • ಸಾಮಾಜಿಕ ಜಾಲತಾಣ: 2017- 70, 2018- 133, 2019- 279 ಮತ್ತು 2020- 703 ಸೇರಿ ಪ್ರಕರಣ ದಾಖಲಾಗಿವೆ.
  • ಇ-ಮೇಲ್ ಹ್ಯಾಕಿಂಗ್:2017- 59, 2018- 31, 2019- 76 ಮತ್ತು 2020- 31 ಸೇರಿ ಒಟ್ಟು 197 ಪ್ರಕರಣ ದಾಖಲಾಗಿವೆ.
  • ಇತರೆ ಸೈಬರ್ ಅಪರಾಧಗಳು :2017- 118, 2018- 285, 2019- 648 ಮತ್ತು 2020- 491 ಸೇರಿ ಒಟ್ಟು 1,542 ಪ್ರಕರಣ ದಾಖಲಾಗಿವೆ.

ಹೀಗೆ 2017ರಲ್ಲಿ 2,744, 2018ರಲ್ಲಿ 5,233, 2019ರಲ್ಲಿ 10,555 ಮತ್ತು 2020ರಲ್ಲಿ 2,961 ಸೇರಿ ಒಟ್ಟು 21,513 ಪ್ರಕರಣಗಳು​ ದಾಖಲಾಗಿವೆ.‌

ಇಂಟರ್​ನೆಟ್ ಬಳಕೆದಾರರ ಮಾಹಿತಿ ಸೈಬರ್ ಕೃತ್ಯ ಎಸಗುವವರ ಬಳಿ ಇರುತ್ತದೆ. ಇದರಿಂದಾಗಿ ಕೃತ್ಯಗಳು ನಡೆಯುತ್ತವೆ. ಅಪರಿಚಿತರ ಜೊತೆ ಕೆಲವೊಮ್ಮೆ ನಮ್ಮ ಮಾಹಿತಿ ಕೊಟ್ಟಾಗ ಅದು ದುರ್ಬಳಕೆ ಆಗುವ ಸಂಭವವಿರುತ್ತದೆ ಎಂದು ಕುಲ್‌ದೀಪ್ ಜೈನ್‌ ವಿವರಿಸಿದರು.

ಜೂನ್ ಮತ್ತು ಜುಲೈ ತಿಂಗಳಲ್ಲಿ ಹೆಚ್ಚಳ:

ಜೂನ್​ ಮತ್ತು ಜುಲೈ ಮಾಸಿಕದಲ್ಲಿ ಸೈಬರ್​ ಕೃತ್ಯಗಳು ಹೆಚ್ಚಾಗಿ ನಡೆಯುತ್ತವೆ. ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪ್ರವೇಶಾತಿ ಇವೇ ತಿಂಗಳಲ್ಲಿ ನಡೆಯುತ್ತವೆ. ಸೈಬರ್ ವಂಚಕರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ನಕಲಿ ವೆಬ್​ಸೈಟ್ ಸೃಷ್ಟಿಸುತ್ತಾರೆ. ಈ ಮೂಲಕ ಸುಲಭವಾಗಿ ವಂಚನೆ ಮಾಡುತ್ತಾರೆ. ಆದರೆ, ಈ ವರ್ಷ ಕೊರೊನಾ ವೈರಸ್​​ನಿಂದ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತವಾಗಿವೆ. ಹೀಗಾಗಿ, ಈ ಕೃತ್ಯಗಳಿಗೆ ಕಡಿವಾಣ ಬಿದ್ದಿದೆ ಎಂದರು.

ವಂಚಕರು ನಕಲಿ ಇ-ಮೇಲ್ ಐಡಿ ಕ್ರಿಯೆಟ್ ಮಾಡಿಕೊಂಡು ನಾನಾ ಮಾದರಿಯಲ್ಲಿ ಸೈಬರ್ ವಂಚನೆ ಎಸಗುತ್ತಾರೆ. ಆನ್​ಲೈನ್ ಬಳಕೆದಾರರು ಈ ಬಗ್ಗೆ ಜಾಗೃತರಾಗಿರಬೇಕು. ಪ್ರಸ್ತುತ 12 ಮಾದರಿಯ ವಂಚನೆಯ ಪ್ರಕರಣಗಳು ಗಮನಕ್ಕೆ ಬಂದಿವೆ ಎಂದು ತಿಳಿಸಿದರು.

Last Updated : Jun 19, 2020, 1:34 PM IST

ABOUT THE AUTHOR

...view details