ಬೆಂಗಳೂರು: ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿರುವ ಜೆಡಿಎಸ್, ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಿದೆ. ಈ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಹೆಚ್ಚು ಕಾರ್ಯಕರ್ತರನ್ನು ಕರೆತರುವ ಜವಾಬ್ದಾರಿಯನ್ನು ಆಯಾ ಕ್ಷೇತ್ರದ ಮುಖಂಡರಿಗೆ ವಹಿಸಲಾಗಿದೆ.
ನಾಳೆ ಜೆಡಿಎಸ್ ಸಮಾವೇಶ: ಪದಾಧಿಕಾರಿಗಳನ್ನು ನೇಮಿಸಿದ ಶಾಸಕ - ಪದಾಧಿಕಾರಿಗಳ ನೇಮಕ
ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಏರ್ಪಡಿಸಿದೆ. ಸಮಾವೇಶಕ್ಕೆ ಅಧಿಕ ಕಾರ್ಯಕರ್ತರನ್ನು ಕರೆತರುವ ಜವಾಬ್ದಾರಿ ವಹಿಸಿರುವ ಕ್ಷೇತ್ರದ ಮುಖಂಡರು ಪದಾಧಿಕಾರಿಗಳನ್ನು ನೇಮಿಸಿದ್ದಾರೆ.
ಅದಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ನಾಗರಾಜ್ ಎಂ. ನೇತೃತ್ವದಲ್ಲಿ ನಡೆದ ಸಭೆಯಲ್ಲಿ 12 ಮಂದಿ ಜಿಲ್ಲೆಯ ಪದಾಧಿಕಾರಿಗಳಾಗಿ ನೇಮಕವಾಗಿದ್ದಾರೆ.
ಪದಾಧಿಕಾರಿಗಳು:ಮಾಳಿಗೇನಹಳ್ಳಿಯ ರಾಮಯ್ಯ (ಉಪಾಧ್ಯಕ್ಷ), ಶ್ಯಾಮಣ್ಣ, ವೆಂಕಟೇಶ್ (ಕಾರ್ಯದರ್ಶಿ), ಪಿಳ್ಳಮುನಿಯಪ್ಪ, ನಾರಾಯಣಸ್ವಾಮಿ ಮತ್ತು ನಾರಾಯಣಸ್ವಾಮಿ (ಸಂಘಟನಾ ಕಾರ್ಯದರ್ಶಿ), ಮಂಜುನಾಥ್, ವೆಂಕಟೇಶ್, ಶಾಂತಮೂರ್ತಿ, ಕೃಷ್ಣಪ್ಪ, ರಾಜಣ್ಣ ಹಾಗೂ ವೀರಭದ್ರಯ್ಯ (ಜಿಲ್ಲಾ ಸಮಿತಿಯ ಸದಸ್ಯರು).
ಈ ವೇಳೆ ಅಧ್ಯಕ್ಷ ನಾಗರಾಜ್ ಮಾತನಾಡಿ, ಉಪಚುನಾವಣೆ ಹಿನ್ನೆಲೆ ಪಕ್ಷವನ್ನು ಹೆಚ್ಚು ಸಂಘಟಿಸಬೇಕಿದೆ. ಅದಕ್ಕಾಗಿ ಇಂದು ಪಕ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನಾಳೆ ನಡೆಯಲಿರುವ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಹೆಚ್ಚು ಕಾರ್ಯಕರ್ತರನ್ನು ಕರೆತರಲು ಹೈಕಮಾಂಡ್ ಸೂಚಿಸಿದೆ. ನಾವೆಲ್ಲರು ಸಮಾವೇಶದಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸುತ್ತೇವೆ ಎಂದರು.