ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 229 ಮಂದಿಗೆ ಕೋವಿಡ್ : ಮೂವರು ಸೋಂಕಿತರು ಸಾವು - ಇಂದಿನ ಕೋವಿಡ್ ವರದಿ

Karnataka COVID update.. ರಾಜ್ಯದಲ್ಲಿಂದು 229 ಹೊಸ ಕೋವಿಡ್‌ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 39,42,575ಕ್ಕೆ ಏರಿಕೆಯಾಗಿದೆ.

ಕೋವಿಡ್
ಕೋವಿಡ್

By

Published : Mar 6, 2022, 8:47 PM IST

ಬೆಂಗಳೂರು : ರಾಜ್ಯದಲ್ಲಿಂದು 48,310 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ 229 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,42,575ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರವೂ 0.47% ರಷ್ಟಿದೆ.

ಇತ್ತ 264 ಸೋಂಕಿತರು ಗುಣಮುಖರಾಗಿದ್ದು, ಈತನಕ 38,99,298 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 3,248 ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ ಮೂವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,991 ಏರಿಕೆ ಕಂಡಿದೆ. ಡೆತ್ ರೇಟು 1.31% ರಷ್ಟಿದೆ.

ವಿಮಾನ ನಿಲ್ದಾಣದಿಂದ 2,244 ಪ್ರಯಾಣಿಕರು ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ 146 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,79,508 ಕ್ಕೆ ಏರಿಕೆ ಆಗಿದೆ. 138 ಮಂದಿ ಗುಣಮುಖರಾಗಿದ್ದು, ಈತನಕ 17,60,149 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,933 ಕ್ಕೆ ಏರಿದೆ. ಸದ್ಯ 2,425 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪಡೇಟ್ಸ್ :

ಅಲ್ಪಾ- 156

ಬೀಟಾ-08

ಡೆಲ್ಟಾ ಸಬ್ ಲೈನೇಜ್- 4,431

ಇತರೆ- 286

ಒಮಿಕ್ರಾನ್-1,115

BAI.1.529- 807

BA1- 89

BA2-219

ಒಟ್ಟು- 5,996

ABOUT THE AUTHOR

...view details