ಕರ್ನಾಟಕ

karnataka

By

Published : Dec 5, 2020, 6:46 AM IST

Updated : Dec 5, 2020, 7:28 AM IST

ETV Bharat / state

ಬಂದ್​ ಹಿನ್ನೆಲೆ ಸಂಘಟನೆ ಪ್ರಮುಖರು ಹಾಗೂ 100ಕ್ಕೂ ಹೆಚ್ಚು ರೌಡಿಗಳನ್ನ ವಶಕ್ಕೆ ಪಡೆದ ಪೊಲೀಸ್

ಇಷ್ಟು ಹೇಳಿದರೂ ಕೂಡ ಬಲವಂತವಾಗಿ ಬಂದ್ ಮಾಡಿಸಲು ಮುಂದಾದ ಕಾರಣ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ ಕನ್ನಡ ಪರ ಸಂಘಟನೆಗಳ ಕೆಲ ಪ್ರಮುಖರು, ಹಾಗೆ ರೌಡಿಗಳನ್ನ ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ..

today Karnataka Band
ಕರ್ನಾಟಕ ಬಂದ್

ಬೆಂಗಳೂರು: ಮರಾಠ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಇಂದು ಬಂದ್​ಗೆ ಕರೆ ಕೊಟ್ಟ ಹಿನ್ನೆಲೆ ಸದ್ಯ ಪೊಲೀಸರು ಅಲರ್ಟ್ ಆಗಿದ್ದಾರೆ. ಸದ್ಯ ಬಂದ್​​ಗೆ ಯಾವುದೇ ಅನುಮತಿಯನ್ನ ಕನ್ನಡ ಪರ ಸಂಘಟನೆಗಳು ಪಡೆದಿಲ್ಲ. ಹೀಗಾಗಿ ರಾತ್ರೋರಾತ್ರಿ ಸಂಘಟನೆಗಳ ಪ್ರಮುಖರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರ ಆಯುಕ್ತರು ನಿನ್ನೆ ಬಲವಂತವಾಗಿ ಯಾರು ಬಂದ್ ನಡೆಸದಂತೆ ಎಚ್ಚರಿಕೆ ನೀಡಿದ್ದರು. ಹಾಗೆ ಬಂದ್ ನಡೆಸೋದಕ್ಕೆ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ನೀಡುವುದಿಲ್ಲ ಎಂದಿದ್ದರು.

ಇಷ್ಟು ಹೇಳಿದರೂ ಕೂಡ ಬಲವಂತವಾಗಿ ಬಂದ್ ಮಾಡಿಸಲು ಮುಂದಾದ ಕಾರಣ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ ಕನ್ನಡ ಪರ ಸಂಘಟನೆಗಳ ಕೆಲ ಪ್ರಮುಖರು, ಹಾಗೆ ನೂರಕ್ಕು ಹೆಚ್ಚು ರೌಡಿಗಳನ್ನ ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ.

ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದು, ಹಾಗೆ 110 ಸೆಕ್ಷನ್ ನಡಿ ಬಾಂಡ್ ಬರೆಸಿಕೊಂಡು ಯಾವುದೇ ಅಹಿತಕರ ಘಟನೆ ನಡೆಸೋದಿಲ್ಲ ಪ್ರತಿಭಟನೆಯಲ್ಲಿ ಪಾಲ್ಗೊಳ್ಳೊದಿಲ್ಲ ಎಂದು ಬಾಂಡ್ ಬರೆಸಿ ವಾರ್ನಿಂಗ್ ನಿಡಿದ್ದಾರೆ. ರೌಡಿ ಶೀಟರ್ ಮತ್ತು ಅವರ ಸಹಚರರು ಬಗ್ಗೆ ನೀಗಾ ಇಡಲು ಆಯಾ ಡಿಸಿಪಿ ಜವಾಬ್ದಾರಿ ವಹಿಸಿದ್ದು, ಕಳೆದ ಎರಡು ದಿನಗಳಿಂದ ಪ್ರತಿ ಪೊಲೀಸ್ ಠಾಣೆಯ ರೌಡಿ ಶೀಟರ್ ಗಳನ್ನ ಕರೆಸಿ ಎಚ್ಚರಿಕೆ ನೀಡುತ್ತಿದ್ದು, ಪೊಲೀಸರ ಕರೆಗೆ ಕೆಲ ರೌಡಿಗಳು ಠಾಣೆಗೆ ಬಂದಿರಲಿಲ್ಲ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಒಟ್ಟು ನೂರಾಕ್ಕು ಹೆಚ್ಚು ರೌಡಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಓದಿ:ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಇಂದು ಬಂದ್​ಗೆ ಕರೆ: ಎಲ್ಲೆಲ್ಲಿ ಪ್ರತಿಭಟನೆ? ಎನಿರುತ್ತೆ, ಏನಿರಲ್ಲ?

ಹಾಗೆ ಸದ್ಯ 16 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. 33 ಕೆಎಸ್‌ಆರ್‌ಪಿ, 32 ಸಿಎಆರ್ ತುಕಡಿ, ಹೊಯ್ಸಳ ನಿಯೋಜಿಸಲಾಗಿದೆ. ಸದ್ಯ ರಾತ್ರಿ ಇಡೀ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ಟೌನ್ ಹಾಲ್, ವಿಧಾನಸೌದದ ಸುತ್ತ ಬಿಗಿ ಭದ್ರತೆ ಮಾಡಲಾಗಿದೆ. ಯಾರೇ ಪ್ರತಿಭಟನೆ ಅಥವಾ ರ್ಯಾಲಿ ಮಾಡಿದ್ರೂ ಕೂಡ ಪೊಲೀಸರು ಅಂತವರನ್ನ ತಕ್ಷಣ ವಶಕ್ಕೆ ಪಡೆಯಲಿದ್ದಾರೆ. ರಾತ್ರಿಯಿಂದಲೇ ಖಾಕಿ ಸಂಪೂರ್ಣವಾಗಿ ಅಲರ್ಟ್ ಆಗಿದೆ.

Last Updated : Dec 5, 2020, 7:28 AM IST

ABOUT THE AUTHOR

...view details