ಕರ್ನಾಟಕ

karnataka

ETV Bharat / state

ಸ್ತಬ್ಧವಾದ ಪಾದರಾಯನಪುರ - ಹೊಂಗಸಂದ್ರ: ನಗರದಲ್ಲಿಂದು ಒಂದೇ ಪ್ರಕರಣ

ಇಂದು ಬೊಮ್ಮನಹಳ್ಳಿ ವಲಯದ ಬೇಗೂರು ವಾರ್ಡ್​ನ ಪೊಲೀಸ್ ಕಾನ್ಸ್​ಟೇಬಲ್​ ಒಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಅದನ್ನು ಹೊರತುಪಡಿಸಿ ನಗರದಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

Bengaluru
ಬೆಂಗಳೂರು

By

Published : May 4, 2020, 8:51 PM IST

ಬೆಂಗಳೂರು: ನಗರದಲ್ಲಿ ಕೋವಿಡ್-19 ಪ್ರಕರಣ ಒಂದು ಮಾತ್ರ ಕಂಡುಬಂದಿದ್ದು, ಒಟ್ಟು ಸೋಂಕಿತರ ಪ್ರಕರಣ 154 ಕ್ಕೆ ಏರಿಕೆಯಾಗಿದೆ. ಇದರಲ್ಲಿ 75 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.

ಇಂದು ಬೊಮ್ಮನಹಳ್ಳಿ ವಲಯದ ಬೇಗೂರು ವಾರ್ಡ್​​​​ನ ಪೊಲೀಸ್ ಕಾನ್ಸ್​ಟೇಬಲ್​ ಒಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಅದನ್ನು ಹೊರತುಪಡಿಸಿ ಹೊಂಗಸಂದ್ರದಲ್ಲಿ ರ್ಯಾಂಡಮ್ ಚೆಕಪ್ ಮಾಡಿದ್ದ 123 ಜನರಲ್ಲಿ ಪ್ರತೀ ರಿಪೋರ್ಟ್ ಕೂಡಾ ನೆಗೆಟಿವ್ ಬಂದಿದೆ. ಇನ್ನು ಪಾದರಾಯನಪುರದಲ್ಲಿ ಇಂದು 28 ಜನರ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, ನಾಳೆ ರಿಪೋರ್ಟ್ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ವಾರ್​ ರೂಂ ಮಾಹಿತಿ

ಇಂದು ಕೊರೊನಾ ಪಾಸಿಟಿವ್ ವ್ಯಕ್ತಿಗೆ ಸೋಂಕು ಹೇಗೆ ತಗುಲಿದೆ ಎಂಬ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅಪಘಾತದ ಕಾರಣದಿಂದ ಇಪ್ಪತ್ತು ದಿನ ರಜೆಯಲ್ಲಿದ್ದ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣ ಕಂಡು ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾದರಾಯನಪುರದಲ್ಲಿ ಇನ್ನೂ 272 ಜನ ಕ್ವಾರಂಟೈನ್ ನಲ್ಲಿದ್ದು, ಹೊಂಗಸಂದ್ರದಲ್ಲಿ 186 ಜನ ಕ್ವಾರಂಟೈನ್ ನಲ್ಲಿದ್ದಾರೆ.

ನಗರದ ಪಶ್ಚಿಮ ವಲಯದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರಿದ್ದು, ಐವತ್ತು ರೋಗಿಗಳಿದ್ದಾರೆ, ನಂತರ ಎರಡನೇ ಸ್ಥಾನದಲ್ಲಿರುವ ಬೊಮ್ಮನಹಳ್ಳಿಯಲ್ಲಿ 42 ಪ್ರಕರಣಗಳಿವೆ. ಒಟ್ಟು 21 ಕಂಟೇನ್​​​​​ಮೆಂಟ್ ಝೋನ್​ಗಳಿವೆ.

ಕೊರೊನಾ ವಾರ್​ ರೂಂ ಮಾಹಿತಿ

ಐದು ವಾರ್ಡ್ ಗಳಲ್ಲಿ ಮುಂದುವರಿಯಲಿದೆ ಕಂಟೇನ್​​​​​​ಮೆಂಟ್ ಅವಧಿ!

ನಗರದ ಒಟ್ಟು 21 ಕಂಟೇನ್​​​​​​ಮೆಂಟ್ ಝೋನ್ ಗಳ ಪೈಕಿ ಐದು ವಾರ್ಡ್​​​​ಗಳ ಕಂಟೇನ್​​​​​ಮೆಂಟ್ ಅವಧಿ ಮತ್ತೆ ಮತ್ತೆ ವಿಸ್ತರಣೆಯಾಗುತ್ತಿದೆ. ಹೊಂಗಸಂದ್ರದಲ್ಲಿ ಮೇ 22 ರವರೆಗೆ, ಪಾದರಾಯನಪುರದಲ್ಲಿ ಮೇ 27 ರವರೆಗೆ, ಕೆ.ಆರ್ ಮಾರುಕಟ್ಟೆಯಲ್ಲಿ ಮೇ 30 ರವರೆಗೆ, ಬಿಳೇಕಹಳ್ಳಿಯಲ್ಲಿ ಮೇ 20 ರವರೆಗೆ, ಹಾಗೂ ಹಂಪಿನಗರದಲ್ಲಿ ಮೇ 22 ರ ವರೆಗೆ ಸೀಲ್ ಡೌನ್ ಮುಂದುವರಿಯಲಿದೆ ಎಂದು ಬಿಬಿಎಂಪಿ ವಾರ್ ರೂಂ ರಿಪೋರ್ಟ್ ನಲ್ಲಿ ತಿಳಿಸಲಾಗಿದೆ.

ABOUT THE AUTHOR

...view details