ಬೆಂಗಳೂರು: ರಾಜ್ಯದಲ್ಲಿ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಕಳೆಗಟ್ಟಿದ್ದು, ನಗರದ ಮಾಣಿಕ್ ಷಾ ಮೈದಾನದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
73ನೇ ಸ್ವಾತಂತ್ರ್ಯೋತ್ಸವ: ಪೊಲೀಸ್ ಕಣ್ಗಾವಲಿನಲ್ಲಿ ಮಾಣಿಕ್ ಷಾ ಮೈದಾನ - ಬೆಂಗಳಳೂರು
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಮಾಣಿಕ್ ಷಾ ಮೈದಾನದಲ್ಲಿ ಸಿಎಂ ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲು ಇಡಲಾಗಿದೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಅಧಿಕಾರಿಗಳು, ಸಂಚಾರಿ ಹೆಚ್ಚುವರಿ ಆಯುಕ್ತ, ಸಿಸಿಬಿ ಹೆಚ್ಚುವರಿ ಆಯುಕ್ತರು ಸೇರಿದಂತೆ 11 ಡಿಸಿಪಿ, 23 ಸಹಾಯಕ, 78 ಇನ್ಸ್ಪೆಕ್ಟರ್, 175 ಸಬ್ ಇನ್ಸ್ಪೆಕ್ಟರ್, 1108 ಕಾನ್ಸ್ಟೇಬಲ್, 77 ಮಹಿಳಾ ಸಿಬ್ಬಂದಿ 150 ಮಫ್ತಿ ಪೊಲೀಸರು, ಹೋಂ ಗಾರ್ಡ್ಗಳು ಸೇರಿದಂತೆ ಒಟ್ಟು 1906 ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಹಾಗೆ ಮಾಣಿಕ್ ಷಾ ಮೈದಾನ ಸುತ್ತ ಟ್ರಾಫಿಕ್ ಪೊಲೀಸರು, ಮಿಲಿಟರಿ ಪಡೆ, ರ‍್ಯಾಪಿಡ್ ಫೋರ್ಸ್ ಭದ್ರತೆ ಇದ್ದು, ಪಾಸ್ ಹೊಂದಿರುವವರಿಗೆ ಮಾತ್ರ ಮೈದಾನದ ಪ್ರವೇಶ ಇದೆ.