ಬೆಂಗಳೂರು: ಈಗಂತೂ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಟಿಕ್ ಟಾಕ್ ಆ್ಯಪ್ನ ಹಿಂದೆ ಬಿದ್ದಿದ್ದಾರೆ. ಇಷ್ಟು ದಿನ ಪಬ್ ಜೀ ಗೇಮ್ ಸೇರಿದಂತೆ ಇತರೆ ಆ್ಯಪ್ಗಳ ಗೀಳು ಅಂಟಿಸಿಕೊಂಡವರು ಈಗ ಟಿಕ್ ಟಾಕ್ ಆ್ಯಪ್ಗೆ ಜೋತು ಬೀಳ್ತಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ ಮಹಿಳಾ ಆಯೋಗ... ರಾಜ್ಯದಲ್ಲೂ ಬ್ಯಾನ್ ಆಗುತ್ತಾ ಟಿಕ್ ಟಾಕ್? - kannada news
ದೇಶದಲ್ಲಿ ಟಿಕ್ ಟಾಕ್ ಹಾವಳಿ ಹೆಚ್ಚಾಗಿದ್ದು, ಎಲ್ಲೆಡೆ ಆ್ಯಪ್ ನಿಷೇಧಿಸಿ ಎಂಬ ಕೂಗು ಕೇಳಿಬರುತ್ತಿದೆ. ಇತ್ತ ರಾಜ್ಯದಲ್ಲೂ ಟಿಕ್ ಟಾಕ್ಗೆ ಬ್ರೇಕ್ ಹಾಕುವಂತೆ ರಾಜ್ಯ ಮಹಿಳಾ ಅಯೋಗ ಕೋರ್ಟ್ ಮೆಟ್ಟಿಲೇರಿದೆ.
ಅಂದಹಾಗೇ, ಈಗ ಟಿಕ್ ಟಾಕ್ ವಿರುದ್ಧ ಕಾನೂನು ಸಮರವನ್ನು ಮಹಿಳಾ ಆಯೋಗ ಸಾರಿದೆ. ಕರ್ನಾಟಕದಲ್ಲಿ ಟಿಕ್ ಟಾಕ್ ಆ್ಯಪ್ ನಿಷೇಧಿಸುವಂತೆ ಹೈಕೋರ್ಟ್ ಮೊರೆ ಹೋಗಿದೆ. ಮಹಿಳೆಯರ ವಿಡಿಯೋಗಳನ್ನು ಅಸಭ್ಯವಾಗಿ ಬಳಸಲಾಗುತ್ತಿದೆ. ಆದ್ದರಿಂದ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಅರ್ಜಿ ಸಲ್ಲಿಸಿರುವುದಾಗಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ತಿಳಿಸಿದ್ದಾರೆ.
ಮಹಿಳಾ ಆಯೋಗಕ್ಕೆ ಸಾಕಷ್ಟು ದೂರು ಬಂದ ಹಿನ್ನೆಲೆ ಈ ಕ್ರಮ ಕೈಗೊಂಡಿದ್ದು, ಟಿಕ್ ಟಾಕ್ ಸಂಪೂರ್ಣ ನಿಷೇಧಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಟಿಕ್ ಟಾಕ್ ಯುವjನರ ಮನಸ್ಸನ್ನ ಹಾಳು ಮಾಡುತ್ತಿದೆ. ಜೊತೆಗೆ ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯನ್ನೂ ಹಾಳು ಮಾಡುವ ಈ ಟಿಕ್ ಟಾಕ್ ಸಂಪೂರ್ಣ ಬ್ಯಾನ್ ಮಾಡಬೇಕು ಅಂತ ಹೇಳಿದರು. ಅಷ್ಟೇ ಅಲ್ಲದೇ ಮಾಹಿತಿ ತಂತ್ರಜ್ಞಾನ ಸಚಿವರಿಗೂ ಕರ್ನಾಟಕದಲ್ಲಿ ಇಂತಹ ಆ್ಯಪ್ಗಳ ನಿಷೇಧಿಸುವಂತೆ ಪತ್ರವನ್ನ ಬರೆಯುವುದಾಗಿ ತಿಳಿಸಿದರು.