ಕರ್ನಾಟಕ

karnataka

ETV Bharat / state

ಕಾರಲ್ಲಿ ಬಂದು ಬೈಕ್​​​ ಕಳ್ಳತನ ಮಾಡ್ತಿದ್ದ ಖದೀಮರು ಅರೆಸ್ಟ್​​​​ - Bike theft

ಸುಲಭವಾಗಿ ಹಣ ಸಂಪಾದನೆ ಮಾಡಿ ಮೋಜಿನ ಜೀವನ ನಡೆಸುವುದಕ್ಕಾಗಿ ಕಳ್ಳತನ ದಾರಿ ಹಿಡಿದಿದ್ದ ಮೂವರು ಖದೀಮರನ್ನು ನಂದಿನಿ‌ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಕಾರಲ್ಲಿ ಬಂದು ಬೈಕ್​ ಕಳ್ಳತನ

By

Published : Nov 14, 2019, 5:58 PM IST

ಬೆಂಗಳೂರು:ರಾತ್ರೋರಾತ್ರಿ ಕಾರಲ್ಲಿ ಬಂದು ಬೈಕ್​ ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ನಂದಿನಿ‌ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಚಂದ್ರಕಾಂತ್​, ಮುನಿ ಸಂಜೀವ್​ ಹಾಗೂ ನಂದನ್ ಬಂಧಿತರು. ಸುಲಭವಾಗಿ ಹಣ ಸಂಪಾದನೆ ಮಾಡಿ ಮೋಜಿನ ಜೀವನ ನಡೆಸುವುದಕ್ಕಾಗಿ ಕಳ್ಳತನ ದಾರಿ ಹಿಡಿದ ಇವರು, ರಸ್ತೆಯಲ್ಲಿ ನಡೆದಾಡಿಕೊಂಡು ಬಂದು ಕಳ್ಳತನ ಮಾಡಿದ್ರೆ ಪೊಲೀಸರು ಸೆರೆ ಹಿಡಿಯಬಹುದು. ಅದಕ್ಕಾಗಿ ಕಾರಲ್ಲಿ ಬಂದು ಕಳ್ಳತನ ಮಾಡುತ್ತಿದ್ದರಂತೆ.

ಕಾರಲ್ಲಿ ಬಂದು ಬೈಕ್​ ಕಳ್ಳತನ

ನಗರದ ಏರಿಯಾಗಳಿಗೆ ನುಗ್ಗಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳ ಹ್ಯಾಂಡಲ್‌ ಮುರಿದು ಕ್ಷಣಾರ್ಧದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದರು. ಇದೇ ರೀತಿ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಏರಿಯಾವೊಂದರಲ್ಲಿ ಮಂಜುನಾಥ್ ಎಂಬುವರ ಬೈಕ್ ಕಳ್ಳತನವಾಗಿತ್ತು. ಇವರು ನೀಡಿದ ದೂರಿನ‌‌‌ ಮೇರೆಗೆ ತನಿಖೆ ಕೈಗೊಂಡ‌ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಬಂಧಿತರ ವಿರುದ್ಧ ಬಾಣಸವಾಡಿ ಹಾಗೂ ಬ್ಯಾಟರಾಯನಯಪುರ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣಗಳನ್ನು ಭೇದಿಸಿರುವುದಾಗಿ ನಂದಿನಿ ಲೇಔಟ್ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details