ಕರ್ನಾಟಕ

karnataka

ETV Bharat / state

1 ಗಂಟೆ ಕಾಲಾವಧಿಯಲ್ಲಿ ನಾಮಪತ್ರ ಸಲ್ಲಿಸಿದ ಮೂವರು ಅಭ್ಯರ್ಥಿಗಳು

ರಾಜ ರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆ ಇಂದೇ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್​ ಹಾಗೂ ಜೆಡಿಎಸ್​ನ ಅಭ್ಯರ್ಥಿಗಳಾದ ಮುನಿರತ್ನ, ಕುಸುಮಾ ಹಾಗೂ ಕೃಷ್ಣಮೂರ್ತಿ ತಮ್ಮ ಪಕ್ಷದ ನಾಯಕರ ಜತೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.

three-candidates-filled-their-nomination-in-within-an-hour
ಒಂದು ಗಂಟೆ ಕಾಲಾವಧಿಯಲ್ಲಿ ನಾಮಪತ್ರ ಸಲ್ಲಿಸಿದ ಮೂವರು ಅಭ್ಯರ್ಥಿಗಳು

By

Published : Oct 14, 2020, 2:00 PM IST

ಬೆಂಗಳೂರು: ರಾಜ ರಾಜೇಶ್ವರಿನಗರ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಿರುವ ಮೂವರು ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. ಮೊದಲು ಬಿಜೆಪಿ ನಂತರ ಜೆಡಿಎಸ್ ಹಾಗೂ ಕೊನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಿದರು.

ಮಧ್ಯಾಹ್ನ 12.30ಕ್ಕೆ ರಾಹುಕಾಲ ಹಿನ್ನೆಲೆ ಬೆಳಗ್ಗೆ 11 ರಿಂದ 12ರ ನಡುವೆ ಮೂವರು ಅಭ್ಯರ್ಥಿಗಳು ಒಬ್ಬರ ನಂತರ ಒಬ್ಬರಂತೆ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಮುನಿರತ್ನ ಮೊದಲು ನಾಮಪತ್ರ ಸಲ್ಲಿಕೆ ಮಾಡಿದರು. ಇವರಿಗೆ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್​ ನಾರಾಯಣ್ ಹಾಗೂ ಸಚಿವ ಆರ್ ಅಶೋಕ್ ಸಾಥ್ ನೀಡಿದರು.

ಈ ವೇಳೆ, ಜೆಡಿಎಸ್​ ಅಭ್ಯರ್ಥಿ ಕೃಷ್ಣಮೂರ್ತಿ ಆಗಮಿಸಿದರು, ಇವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೂಡಿದರು. ಈ ವೇಳೆ, ಮುನಿರತ್ನ ಹಾಗೂ ಹೆಚ್​ಡಿಕೆ ಮುಖಾಮುಖಿಯಾದ ಸಂದರ್ಭ ಎದುರಾಯಿತು.

ಇನ್ನು ಕಾಂಗ್ರೆಸ್​​ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಆಗಮಿಸಿದ್ದರು. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇವರ ಜೊತೆಗೂಡಿ ನಾಮಪತ್ರ ಸಲ್ಲಿಸಿದರು. ಮೂರು ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿ ತೆರಳಿದ್ದು, ಇಂದು ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details