ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕ ವ್ಯಕ್ತಿಯಿಂದ ಬೆದರಿಕೆ ಮೇಲ್ ಬಂದಿರುವ ಘಟನೆ ಇಂದು ನಡೆದಿದೆ.
ಕೆಐಎಎಲ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕನಿಂದ ಬೆದರಿಕೆ ಮೇಲ್.. ಹೈ ಅಲರ್ಟ್! - ಕೆಐಎಎಲ್ಗೆ ಬಾಂಬ್ ಬೆದರಿಕೆ
ಇಂದು ಮಧ್ಯಾಹ್ನ 12ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕ ವ್ಯಕ್ತಿಯಿಂದ ಬೆದರಿಕೆ ಮೇಲ್ ಬಂದಿದೆ. ಈ ಬಗ್ಗೆ ಏರ್ಪೋರ್ಟ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಕಾರ್ಗೋ ಟರ್ಮಿನಲ್ ಕಸ್ಟಮ್ಸ್ ಅಧಿಕಾರಿಗಳಿಗೆ, ಕಮರ್ಶಿಯಲ್ ಸ್ಟ್ರೀಟ್ ನಿಂದ ಅನಾಮಿಕ ವ್ಯಕ್ತಿ ಇಂದು ಮಧ್ಯಾಹ್ನ 12ರ ಸುಮಾರಿಗೆ ಮೇಲ್ ಮಾಡಿದ್ದಾನೆ. ಮೇಲ್ ಬಂದ ಬಳಿಕ ಕೆಐಎಎಲ್ ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, ತಪಾಸಣೆ ಬಳಿಕ ಅದು ಹುಸಿ ಬಾಂಬ್ ಮೇಲ್ ಅನ್ನೋದು ಸಾಬೀತಾಗಿದೆ. ಇನ್ನು ಬೆದರಿಕೆ ಮೇಲ್ ಬಗ್ಗೆ ಏರ್ಪೋರ್ಟ್ ಅಧಿಕಾರಿಗಳು ಏರ್ಪೋರ್ಟ್ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶಕ್ಕೂ ಇದಕ್ಕೂ ಸಂಬಂಧ ಇದೆಯಾ ಇಲ್ವಾ ಅನ್ನೋದನ್ನು ತಾಳೆ ಹಾಕಿ ಪರಿಶೀಲನೆ ನಡೆಸುತ್ತಿದ್ದಾರೆ.