ಬೆಂಗಳೂರು:ತಾಮ್ರ, ಹಿತ್ತಾಳೆ ಪಾಲಿಶ್ ಮಾಡುವ ಸೋಗಿನಲ್ಲಿ ಮನೆಗೆ ಬಂದ ಇಬ್ಬರು ಅಪರಿಚಿತರು ಪಾಲಿಶ್ ನೆಪದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.
ಚಿನ್ನಾಭರಣ ಪಾಲಿಶ್ ಮಾಡಿಸುವ ಮುನ್ನ ಎಚ್ಚರ... ಹೀಗೂ ಯಾಮಾರಿಸ್ತಾರೆ ಖದೀಮರು!
ಪಾಲಿಶ್ ಮಾಡುವ ಸೋಗಿನಲ್ಲಿ ಮನೆಗೆ ಬಂದ ಇಬ್ಬರು ಅಪರಿಚಿತರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಭಾಗ್ಯಮ್ಮ ಎಂಬುವರು 170 ಗ್ರಾಂ ಚಿನ್ನಾಭರಣ ಕಳೆದುಕೊಂಡಿದ್ದಾರೆ. ಇದೇ ತಿಂಗಳು ಅ.5ರಂದು ತ್ರಾಮ ಹಿತ್ತಾಳೆ ಪಾಲಿಶ್ ಸೋಗಿನಲ್ಲಿ ಇಬ್ಬರು ಅಪರಿಚಿತರು ಮನೆಗೆ ಬಂದಿದ್ದಾರೆ. ದುಷ್ಕರ್ಮಿಗಳ ಸಂಚು ತಿಳಿಯದ ಭಾಗ್ಯಮ್ಮ, ಆರೋಪಿಗಳು ಹೇಳಿದಂತೆ ಪಾಲಿಶ್ ಮಾಡಲು ಕರ್ಪೂರದ ಉದ್ಗರಣೆ ನೀಡಿದ್ದಾರೆ. ಇದರಂತೆ ಆರೋಪಿಗಳು ಉದ್ಗರಣೆ ಪಾಲಿಶ್ ಮಾಡಿಕೊಟ್ಟಿದ್ದಾರೆ.
ಬಳಿಕ 90 ಗ್ರಾಂ. ಮಾಂಗಲ್ಯ ಸರ ಹಾಗೂ ಸೊಸೆಯ 80 ಗ್ರಾಂ. ತೂಕದ ಸರ ಕೊಟ್ಟಿದ್ದಾರೆ. ಪಾಲಿಶ್ ಮಾಡಲು ಅರಿಶಿಣ ಹಾಗೂ ನೀರು ಹಾಕಿ ಬಿಸಿ ಐದು ನಿಮಿಷ ಬಿಸಿ ಮಾಡಿ ತಂದು ಕೊಡುವಂತೆ ಕಳ್ಳರು ಹೇಳಿದ್ದಾರೆ. ನಂತರ ಪಕ್ಕದ ಮನೆಗೆ ತೆರಳುವುದಾಗಿ ಹೇಳಿದ ಖದೀಮರು ಸ್ಥಳದಿಂದ ಸರಗಳೊಂದಿಗೆ ಕಾಲ್ಕಿತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹಲಸೂರು ಗೇಟ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.