ಬೆಂಗಳೂರು:ಹೆಬ್ಬಾಳ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚಿನ್ನಾಭರಣ ಕಳ್ಳತನ ಮಾಡ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ರಾತ್ರಿ ಮನೆ ಬಾಗಿಲು ಒಡೆದು 64 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ ಕದ್ದೊಯ್ದಿದ್ದ ಆರೋಪಿ ಕೆಎಚ್ಬಿ ಮುಖ್ಯ ರಸ್ತೆಯ ಡಿಮಾರ್ಟ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವೇಳೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕದ್ದ ಮಾಲನ್ನು ಜನರಿಗೆ ಮಾರಲು ನಿಂತಿದ್ದ ಆರೋಪಿ ದಂಡಪಾಣಿಯಿಂದ 8.27 ಲಕ್ಷ ರೂ. ಮೌಲ್ಯದ 178 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಕದ್ದ ಚಿನ್ನಾಭರಣ ಮಾರುವಾಗ ರೆಡ್ ಹ್ಯಾಂಡ್ ಆಗಿ ಸೆರೆಸಿಕ್ಕ ಖದೀಮ - hebbala police arrested thief
ಕಂಡವರ ಮನೆಯಲ್ಲಿ ದೋಚಿದ 8.27 ಲಕ್ಷ ರೂ. ಮೌಲ್ಯದ 178 ಗ್ರಾಂ ಚಿನ್ನಾಭರಣವನ್ನು ಮಾರಲು ನಿಂತಿದ್ದ ಖತರ್ನಾಕ್ ಕಳ್ಳನನ್ನು ಹೆಬ್ಬಾಳ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ರೆಡ್ ಹ್ಯಾಂಡ್ ಆಗಿ ಸೆರೆ
ಆರೋಪಿಯ ಬಂಧನದಿಂದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಚಿನ್ನಾಭರಣ ಕಳವು ಪ್ರಕರಣ ಪತ್ತೆಯಾಗಿದೆ. ಬಂಧಿತ ಆರೋಪಿ ಆರ್.ಟಿ. ನಗರ ಸರಹದ್ದಿನಲ್ಲಿ ಕಬ್ಬಿಣ ರಾಡಿನಿಂದ ಮನೆಯ ಬಾಗಿಲು ಬೀಗ ಮುರಿದು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಮನೆ ಮಾಲೀಕರು ಈ ಹಿಂದೆಯೇ ದೂರು ದಾಖಲಿಸಿದ್ದರು.
ಇದನ್ನೂ ಓದಿ:ಜಮೀನು ವಿಚಾರವಾಗಿ ಸಂಬಂಧಿಕರ ಮಧ್ಯೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ