ಬೆಂಗಳೂರು: ಮನೆಗಳಲ್ಲಿ ಕದ್ದ ಆಭರಣದ ವಸ್ತುಗಳನ್ನು ರಸ್ತೆಯ ಬದಿ ಮಾರಾಟ ಮಾಡುತ್ತಿದ್ದ ಮನೆಗಳ್ಳನೊಬ್ಬನನ್ನು ಮಾಗಡಿ ರೋಡ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೈಯದ್ ರಫಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಮನೆಗಳಿಗೆ ಕನ್ನ.. ಬೆಂಗಳೂರಲ್ಲಿ ರಸ್ತೆ ಬದಿ ಚಿನ್ನಾಭರಣ ಮಾರುತ್ತಿದ್ದ ಖದೀಮ ಅಂದರ್
ಕಳ್ಳತನ ಮಾಡಿದ ಬೆಳ್ಳಿ ಆಭರಣಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಅನುಮಾನದಿಂದ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬೆಳ್ಳಿ ಆಭರಣಗಳನ್ನ ಕದ್ದು ಮಾರಾಟ ಮಾಡುತ್ತಿರುವ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ.
ಆರೋಪಿ ಸೈಯದ್ ರಫಿ ಕಳ್ಳತನ ಮಾಡಿದ ಬೆಳ್ಳಿ ಆಭರಣಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಅನುಮಾನದಿಂದ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬೆಳ್ಳಿ ಆಭರಣಗಳನ್ನ ಕಳ್ಳತನ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಈತ ಬಾಯ್ಬಿಟ್ಟಿದ್ದಾನೆ ಎನ್ನಲಾಗ್ತಿದೆ. ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರು, ಆತನಿಂದ 7.8 ಲಕ್ಷ ಮೌಲ್ಯದ 124 ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ಬೆಳ್ಳಿ ಆಭರಣಗಳನ್ನ ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿ ವಿರುದ್ಧ ಮಾಗಡಿ ರಸ್ತೆ ಠಾಣೆಯಲ್ಲಿ 2 ಕೇಸ್, ಬ್ಯಾಡರಹಳ್ಳಿಯಲ್ಲಿ 3, ಬಸವೇಶ್ವರ ನಗರ ಠಾಣೆಯಲ್ಲಿ 1ಕೇಸ್ ಬೆಳಕಿಗೆ ಬಂದಿವೆ. ಮಾಗಡಿ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.