ಚಿಕ್ಕೋಡಿ: ನಿವೃತ್ತ ಪೊಲೀಸ್ ಸಿಬ್ಬಂದಿಯ ಮನೆಗೆ ರಾತ್ರಿ ವೇಳೆ ಬೀಗ ಮುರಿದು ಒಳನುಗ್ಗಿದ ಕಳ್ಳರು ಚಿನ್ನ ಹಾಗೂ ಹಣ ದೋಚಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದಿದೆ. ಮೀಸಲು ಪಡೆಯ ನಿವೃತ್ತ ಪೊಲೀಸ್ ಅಶೋಕ ಕಲಾಜ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. 50 ಗ್ರಾಂ ಆಭರಣ, 10 ಸಾವಿರ ನಗದು ಕದ್ದೊಯ್ದಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿವೃತ್ತ ಪೊಲೀಸ್ ಮನೆಗೆ ಕಳ್ಳರ ಕನ್ನ: ಹಣ, ಬಂಗಾರ ದೋಚಿ ಪರಾರಿ - ಕಳ್ಳರು ಪರಾರಿ
ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿರುವ ನಿವೃತ್ತ ಪೊಲೀಸ್ ಸಿಬ್ಬಂದಿಯ ಮನೆಗೆ ನುಗ್ಗಿರುವ ಕಳ್ಳರು ಚಿನ್ನ, ಹಣ ದೋಚಿ ಪರಾರಿಯಾಗಿದ್ದಾರೆ.
ನಿವೃತ್ತ ಪೊಲೀಸ್ ನ ಮನೆಯಲ್ಲಿ ಕಳ್ಳತನ
ಕಲಾಜೆ ಕುಟುಂಬ ವಾರದಿಂದ ಮನೆಗೆ ಬೀಗ ಹಾಕಿ ಪರ ಊರಿಗೆ ತೆರಳಿದ್ದರು. ಇದನ್ನು ಗಮನಿಸಿದ ದುಷ್ಕರ್ಮಿಗಳು ರಾತ್ರಿ ಮನೆಗೆ ನುಗ್ಗಿ ಕಳ್ಳತನ ಮಾಡಲು ಹೊಂಚು ಹಾಕಿ ಹಣ, ಬಂಗಾರ ದೋಚಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂಓದಿ:ಟೆಕ್ಕಿ ಅಪಹರಣ: ಚಿನ್ನಾಭರಣ ಸೇರಿ ₹10 ಲಕ್ಷ ದೋಚಿದ ದುಷ್ಕರ್ಮಿಗಳ ಬಂಧನ
Last Updated : Dec 4, 2022, 4:50 PM IST