ಕರ್ನಾಟಕ

karnataka

By

Published : Jun 11, 2019, 10:42 AM IST

ETV Bharat / state

ಯುವತಿ ಜೊತೆ ವೀಲಿಂಗ್ ಮಾಡಿದ್ದ ಯುವಕ...ಇದೀಗ ಪೊಲೀಸರ ಅತಿಥಿ

ಯುವತಿ ಜೊತೆ ವೀಲಿಂಗ್ ಮಾಡಿದ್ದ ನೂರ್ ಅಹಮ್ಮದ್ ಎಂಬ ಯುವಕನನ್ನು ಇದೀಗ ಹೆಬ್ಬಾಳ ಟ್ರಾಫಿಕ್ ಪೊಲೀಸರು ಬಂಧಿಸಿದ್ದಾರೆ.

ಯುವತಿ ಜೊತೆ ವೀಲಿಂಗ್ ಮಾಡಿದ್ದ ಯುವಕ

ಬೆಂಗಳೂರು: ದೇವನಹಳ್ಳಿ ರಸ್ತೆಯಲ್ಲಿ ಯುವತಿ ಜೊತೆ ವೀಲಿಂಗ್ ಮಾಡಿದ್ದ ಆರೋಪಿಯನ್ನ ಇದೀಗ ಹೆಬ್ಬಾಳ ಟ್ರಾಫಿಕ್ ಪೊಲೀಸರು ಬಂಧಿಸಿದ್ದಾರೆ.

ನೂರ್ ಅಹಮ್ಮದ್ ಬಂಧಿತ ಆರೋಪಿ‌. ಕಳೆದ ಎರಡು ದಿನದ ಹಿಂದೆ ಸ್ನೇಹಿತೆ ಜೊತೆ ನಂದಿಬೆಟ್ಟಕ್ಕೆ ತೆರಳುವಾಗ, ದೇವನಹಳ್ಳಿ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತ ಸ್ಟಂಟ್ ಮಾಡಿದ್ದ. ವೀಲಿಂಗ್ ಮಾಡುವ ದೃಶ್ಯವನ್ನ ಸೆರೆಹಿಡಿದು ಆ ವಿಡಿಯೋವನ್ನು ಹಲೋ ಆ್ಯಪ್​​​ನಲ್ಲಿ ಯುವತಿ ಶೇರ್ ಮಾಡಿದ್ದಳು.

ಯುವತಿ ಜೊತೆ ವೀಲಿಂಗ್ ಮಾಡಿದ್ದ ಯುವಕ

ಸ್ಟಂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಹೆಬ್ಬಾಳ ಪೊಲೀಸರು ಸ್ವಯಂಪ್ರೇರಣೆಯ ( ಸುಮೋಟೋ) ದೂರು ದಾಖಲಿಸಿದ್ದರು. ಇದೀಗ ಹೆಬ್ಬಾಳ ಪೊಲೀಸರಿಂದ ಆರೋಪಿ ಅಂದರ್ ಆಗಿದ್ದು, ಆರೋಪಿಯ ಬಳಿ ಇದ್ದ ಬೈಕ್ ಜಪ್ತಿ ಮಾಡಿದ್ದಾರೆ.

ಇನ್ನು ಆರೋಪಿ ಯಲಹಂಕಾ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಮೋಜು ಮಸ್ತಿಗಾಗಿ ಈ ರೀತಿ ಮಾಡಿದ್ದಾನೆ ಎಂದು ತನಿಖೆಯಲ್ಲಿ ಬಯಲಾಗಿದೆ.

For All Latest Updates

TAGGED:

ABOUT THE AUTHOR

...view details