ಬೆಂಗಳೂರು:ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ ಬಗ್ಗೆ ಪೊಲೀಸ್ ಸಂಘದ ಅಧ್ಯಕ್ಷ ವಿ.ಶಶಿಧರ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿದೆ.
ಬಜೆಟ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಪ್ರಕರಣ: ಶಶಿಧರ್ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ಬ್ರೇಕ್
ಬಜೆಟ್ನಲ್ಲಿ ರಾಘವೇಂದ್ರ ಔರಾದ್ಕರ್ ಸಮಿತಿಯ ವರದಿ ಮಂಡನೆಯಾಗಿಲ್ಲ ಎಂದು ಸಿಎಂ ವಿರುದ್ಧ ಫೇಸ್ಬುಕ್ನಲ್ಲಿ ಅಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ಪೊಲೀಸ್ ಸಂಘದ ಅಧ್ಯಕ್ಷ ವಿ.ಶಶಿಧರ್ ವಿದುದ್ಧ ದಾಖಲಿಲಾಗಿದ್ದ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿದೆ.
ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್ನಲ್ಲಿ2016ರಲ್ಲಿ ಸಿದ್ಧಪಡಿಸಿದ ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ಯಾವುದು ಕೂಡ ಸರಿಯಾದ ರೀತಿ ಮಂಡನೆಯಾಗಿಲ್ಲ ಎಂದು ಕಿಡಿಕಾರಿದ್ದರು. ಅಲ್ಲದೆ, ಎಫ್ಬಿಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದರು.
'ಕೊಳ್ಳಿ ಇಟ್ಟ ಕುಮಾರ ಮಹಾತ್ಮ ನೊಂದ ಪೊಲೀಸ್, ಶಿವನ ಸನ್ನಿಧಿಯಲ್ಲಿ ಕೊಟ್ಟ ಮಾತಿಗೆ ಬೆಲೆನೇ ಇಲ್ವಾ ನೊಂದ ಪೊಲೀಸ್. ಮೈತ್ರಿ ಸರ್ಕಾರದ ಪೊಲೀಸ್ ದ್ರೋಹಿ ನೀತಿ ವಿರುದ್ದ ಪೊಲೀಸ್ ಕುಟುಂಬಗಳು ಬೀದಿಗಿಳಿಯಲು ಸಕಾಲ ಇದಾಗಿದೆ. ಅದೇನೂ ನಾಲಗೆಯೋ ಗೊತ್ತಿಲ್ಲಾ. ಚಿಂತಿಸಬೇಡಿ ನೊಂದ ಪೊಲೀಸ್, ಕುಮಾರಸ್ವಾಮಿ ನಂಬಿಕೆ ದ್ರೋಹವನ್ನ ಸಮಾನವಾಗಿ ಸ್ವೀಕರಿಸಿ' ಎಂದು ಫೇಸ್ಬುಕ್ನಲ್ಲಿ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ಪೋಸ್ಟ್ ಹಾಕಿದ್ರು. ಈ ಹಿನ್ನೆಲೆ ಶಶಿಧರ್ ಅವರನ್ನ ಬಂಧಿಸಲಾಗಿತ್ತು.