ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ನೂತನ ಸಿಎಂ ಪಟ್ಟ ಅಲಂಕರಿಸಲಿದ್ದಾರೆ : ಆರ್.ಅಶೋಕ್ ವಿಶ್ವಾಸದ ಮಾತು - Kannada news

ಇವತ್ತು ಮೈತ್ರಿ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಂಡು ರಾಜ್ಯಕ್ಕೆ ನೂತನ ಸಿಎಂ ಪಟ್ಟ ಏರಲಿದ್ದಾರೆ. 100ಕ್ಕೆ ನೂರರಷ್ಟು ಸದನದಲ್ಲಿ ವಿಶ್ವಾಸಮತಯಾಚನೆ ಗೊತ್ತುವಳಿ ಪ್ರಕ್ರಿಯೆ ಜರುಗಲಿದೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಶಾಸಕ ಆರ್.ಅಶೋಕ್

By

Published : Jul 23, 2019, 1:01 PM IST

Updated : Jul 23, 2019, 2:58 PM IST

ಬೆಂಗಳೂರು :ಯಾವುದೇ ಸಂಶಯಬೇಡ. ಇಂದು ಸದನದಲ್ಲಿ ವಿಶ್ವಾಸಮತಯಾಚನೆಯಾಗಲಿದ್ದು,ಇದರಲ್ಲಿ ಮೈತ್ರಿ ಸರ್ಕಾರ ಸೋಲಲಿದೆ.‌ ಈ ಮೂಲಕ ಇಂದು ರಾತ್ರಿ 7 ಗಂಟೆಗೆ ರಾಜ್ಯಕ್ಕೆ‌ ನೂತನ ಸಿಎಂ ಪಟ್ಟ ಅಲಂಕರಿಸಲಿದ್ದಾರೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿನ್ನೆಯ ವಿದ್ಯಮಾನ ಗಮನಿಸಿದಂತೆ ಸ್ಪೀಕರ್ ಖಡಕ್ ಆಗಿ ವಿಶ್ವಾಸಮತಕ್ಕೆ ಅವಕಾಶ ಮಾಡಿಕೊಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಇಂದು ಸಂಜೆ 5 ಗಂಟೆ ಒಳಗೆ ವಿಶ್ವಾಸಮತ ಪ್ರಕ್ರಿಯೆ ನಡೆಸುವ ಭರವಸೆ ಇದೆ. ಇವತ್ತು 100 ಅಲ್ಲ. 1000ದಷ್ಟು ಸದನದಲ್ಲಿ ವಿಶ್ವಾಸಮತಯಾಚನೆ ಗೊತ್ತುವಳಿ ಪ್ರಕ್ರಿಯೆ ಜರುಗಲಿದೆ. ಈ ಬಗ್ಗೆ ಯಾವುದೇ ಸಂಶಯ ಬೇಡ. ಯಾರಿಗೆ ಬಹುಮತ ಇದೆಯೋ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂಬುವುದು ಖಚಿತ ಎಂದು ಭವಿಷ್ಯ ನುಡಿದರು.

ಬಿಜೆಪಿ ಶಾಸಕ ಆರ್.ಅಶೋಕ್

ಸಿಎಂ ಸದನಕ್ಕೆ ಹಾಜರಾಗಿಲ್ಲ ಎಂಬುದರ ಪ್ರತಿಕ್ರಿಯಿಸಿ, ಫುಟ್ಬಾಲ್ ಆಟದಲ್ಲಿ ಗೋಲ್ ಕೀಪರ್ ಇಲ್ಲದ ಪರಿಸ್ಥಿತಿ ಮೈತ್ರಿ ಪಕ್ಷದ್ದಾಗಿದೆ. ಫ್ರೀ ಗೋಲ್‌ ಈಗ. ಗೋಲ್ ಹೊಡಿರಿ ಎಂದು ಬಿಟ್ಟಿದ್ದಾರೆ ಎಂದು ಅಣಕವಾಡಿದರು. ವಿಶ್ವಾಸಮತ ಯಾಚಿಸುವುದಾಗಿ ಆಡಳಿತ ಪಕ್ಷವೇ ಸ್ಪೀಕರ್ ಅವರಿಗೆ ಹೇಳಿ ಬಹುಮತ ಸಾಬೀತುಪಡಿಸಲು ಸಮಯಾವಕಾಶ ಕೇಳಿತ್ತು. ಇದರಂತೆ ನಿ‌ಗದಿತ ದಿನದಂದು ಬಹುಮತ ಸಾಬೀತುಪಡಿಸದೇ, ಸುಖಾಸುಮ್ಮನೆ ಮೈತ್ರಿ ಸರ್ಕಾರದ ಸದಸ್ಯರು ಬಾವಿಗೆ ಬಳಿ ಬಂದು ಗಲಾಟೆ ಮಾಡಿರುವುದು ಸದನಕ್ಕೆ ಗೌರವ ತರುವುದಿಲ್ಲ ಎಂದರು.

Last Updated : Jul 23, 2019, 2:58 PM IST

ABOUT THE AUTHOR

...view details