ಬೆಂಗಳೂರು:ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಒಂದೊಂದೇ ಲೋಪ ಕಾಣಿಸಿಕೊಳ್ಳುತ್ತಿದೆ. ಮೊದಮೊದಲು ಟ್ರಿನಿಟಿ ಮೆಟ್ರೋ ಸ್ಟೇಷನ್‌ನಲ್ಲಿ ಪಿಲ್ಲರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಇಂದಿರಾನಗರ ಮೆಟ್ರೋ, ಇದೀಗ ಮೇಯೋಹಾಲ್ ಬಳಿಯಲ್ಲಿರುವ ಮೆಟ್ರೋ ಪಿಲ್ಲರ್ ನಲ್ಲಿ ದೋಷ ಕಾಣಿಸಿಕೊಂಡಿದೆ.
'ನಮ್ಮ ಮೆಟ್ರೋ'ದಲ್ಲಿ ನಿಲ್ಲದ ಪಿಲ್ಲರ್ ಬೇರಿಂಗ್ ಪ್ರಾಬ್ಲಂ - ಬಿಎಂಆರ್ ಸಿಎಲ್
ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಬಂದ ನಮ್ಮ ಮೆಟ್ರೋ ಸೇವೆಯಿಂದ ಟ್ರಾಫಿಕ್ ಕಡಿಮೆ ಆಗದೇ ಇದ್ದರೂ, ಜನರಿಗೆ ಸಮಯ ಉಳಿತಾಯ ಅಂತೂ ಆಗಿದೆ. ಜನರ ಅಚ್ಚುಮೆಚ್ಚಿನ ನಮ್ಮ ಮೆಟ್ರೋ ಸೇವೆಯನ್ನು ನಿತ್ಯಾ ಲಕ್ಷಾಂತರ ಜನರು ಪಡ್ಕೊಳ್ತಿದ್ದಾರೆ. ಆದ್ರೀಗ ಒಂದೊಂದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ನಮ್ಮ ಮೆಟ್ರೋದಲ್ಲಿ ನಿಲ್ಲದ ಪಿಲ್ಲರ್ ಬೇರಿಂಗ್ ಪ್ರಾಬ್ಲಂ
ನೇರಳೆ ಮಾರ್ಗದ ಮೇಯೋ ಹಾಲ್ ಮೆಟ್ರೋ ಪಿಲ್ಲರ್ ನಂ 174 ಬೇರಿಂಗ್ ಪ್ರಾಬ್ಲಂ ಸಮಸ್ಯೆ ಆಗಿದ್ದು,ನೇರಳೆ ಮಾರ್ಗದಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಮತ್ತೆ ಆತಂಕ ಶುರುವಾಗಿದೆ.
ಬಿಎಂಆರ್ ಸಿಎಲ್ ಕಳಪೆ ಕಾಮಗಾರಿಯಿಂದ ಪಿಲ್ಲರ್ ಬೇರಿಂಗ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ಯಾ ಅನ್ನೋ ಅನುಮಾನಗಳು ಶುರುವಾಗಿದೆ. ಇತ್ತ ಪ್ರಯಾಣಿಕರ ಕಣ್ಣುತಪ್ಪಿಸಿ ಬಿಎಂಆರ್‌ಸಿಎಲ್ ದುರಸ್ತಿ ಕಾರ್ಯ ಮಾಡುತ್ತಿದೆ. ರಾತ್ರೋರಾತ್ರಿ ಪಿಲ್ಲರ್ ದುರಸ್ಥಿ ಮಾಡಿದ್ದು, ಮೆಟ್ರೋ ಮೊದಲ ಹಂತದ ನಿರ್ಮಾಣ ಕಾಮಗಾರಿಯಲ್ಲಿ ಲೋಪ ಉಂಟಾಗಿದೆಯಾ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.