ಬೆಂಗಳೂರು: ನೂತನ ಸಿಎಂ ಬಸವರಾಜ್ ಬೊಮ್ಮಾಯಿಗೆ ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಅವರು, ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಮಗೆ ತುಂಬು ಹೃದಯದ ಅಭಿನಂದನೆಗಳು. ತಮ್ಮ ನೇತೃತ್ವದ ಬಿಜೆಪಿ ಸರ್ಕಾರ ನಾಡಿನ ಜನರ ಹಿತರಕ್ಷಣೆಗೆ ಕಟಿಬದ್ಧರಾಗಿ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಆಶಿಸಿದ್ದಾರೆ.
"ನಾನು ಮತ್ತು ನಿಮ್ಮ ತಂದೆಯವರು ಆತ್ಮೀಯ ಮಿತ್ರರಾಗಿದ್ದೆವು. ಎಸ್.ಆರ್. ಬೊಮ್ಮಾಯಿಯವರು ಹಲವು ಬಾರಿ ನನಗೆ ಮಾರ್ಗದರ್ಶಕರಾಗಿ, ಹಿತೈಷಿಗಳಾಗಿದ್ದು ನನ್ನ ಸ್ಮೃತಿ ಪಟಲದಲ್ಲಿದೆ. ಸಜ್ಜನ ಸೌಮ್ಯ ರಾಜಕಾರಣಿಯಾಗಿ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಸುಮಧುರ ಸಂಬಂಧ ಹೊಂದಿದ್ದ ನಿಮ್ಮ ತಂದೆಯವರಂತೆ ತಾವು ಸಹ ಅವರ ದಾರಿಯಲ್ಲಿ ಮುನ್ನಡೆದು ಎಲ್ಲರ ವಿಶ್ವಾಸಗಳಿಸಿ ಯಶಸ್ವಿಯಾಗಿ ತಮ್ಮ ಆಡಳಿತ ನಡೆಸುವಂತಾಗಲಿ" ಎಂದು ಆಶಿಸಿದ್ದಾರೆ.
ಸರ್ಕಾರ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಮುನ್ನಡೆಯಲಿ: ಸಿಎಂ ಬೊಮ್ಮಾಯಿಗೆ ಎಸ್ಎಂಕೆ ಸಲಹೆ - ಬೊಮ್ಮಾಯಿ ಸರ್ಕಾರಕ್ಕೆ ಎಸ್ಎಂ ಕೃಷ್ಣ ಸಲಹೆ
ಈ ಸಂಬಂಧ ಪತ್ರ ಬರೆದಿರುವ ಅವರು, ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಮಗೆ ತುಂಬು ಹೃದಯದ ಅಭಿನಂದನೆಗಳು. ತಮ್ಮ ನೇತೃತ್ವದ ಬಿಜೆಪಿ ಸರ್ಕಾರ ನಾಡಿನ ಜನರ ಹಿತರಕ್ಷಣೆಗೆ ಕಟಿಬದ್ಧರಾಗಿ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಆಶಿಸಿದ್ದಾರೆ.
ಸಿಎಂ ಬೊಮ್ಮಾಯಿಗೆ ಎಸ್ಎಂಕೆ ಅಭಿನಂದನೆ
ಬುಧವಾರ ಬಸವರಾಜ ಬೊಮ್ಮಾಯಿ ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇದನ್ನು ಓದಿ:BSY ಅಭಿಮಾನಿ ಮನೆಗೆ ಸುರೇಶ್ ಕುಮಾರ್ ಭೇಟಿ, ಸಾಂತ್ವನ:'ಆಮ್ಲಜನಕ ದುರಂತ' ನೆನಪಿಸಿದ ನೆಟಿಜನ್ಸ್