ಕರ್ನಾಟಕ

karnataka

ETV Bharat / state

ಎಪಿಡೆಮಿಕ್ ಕಾಯ್ದೆಯ ಸುಗ್ರೀವಾಜ್ಞೆ ರಾಜಭವನಕ್ಕೆ ರವಾನೆ... ಪುಂಡರಿಗೆ ಜೈಲೂಟ ಗ್ಯಾರಂಟಿ

ಕೋವಿಡ್​-19 ವಿರುದ್ಧ ಹೋರಾಟದಲ್ಲಿ ತೊಡಗಿರುವ ಕೊರೊನಾ ವಾರಿಯರ್ಸ್​ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಎಪೆಡೆಮಿಕ್​ ಕಾಯ್ದೆ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲು ಸಜ್ಜಾಗಿದೆ. ಇಂದು ಸಗ್ರೀವಾಜ್ಞೆಯನ್ನು ರಾಜಭವನಕ್ಕೆ ಕಳಿಸಲಾಗಿದೆ.

dsdd
ಎಪಿಡಮಿಕ್ ಕಾಯ್ದೆಯ ಸುಗ್ರೀವಾಜ್ಞೆ ರಾಜಭವನಕ್ಕೆ ರವಾನೆ

By

Published : Apr 22, 2020, 1:28 PM IST

ಬೆಂಗಳೂರು: ಉತ್ತರ ಪ್ರದೇಶ ಹಾಗೂ ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರ ರೂಪಿಸಿರುವ‌ ಕರ್ನಾಟಕ ಸ್ಟೇಟ್ ಎಪಿಡೆಮಿಕ್ ಕಾಯ್ದೆ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿದೆ.

ಇಂದು ಸುಗ್ರೀವಾಜ್ಞೆಯನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿದ್ದು, ಸಂಜೆ ವೇಳೆಗೆ ರಾಜ್ಯಪಾಲ ವಜುಭಾಯ್ ವಾಲಾ ಅಂಕಿತ ಹಾಕುವ ಸಾಧ್ಯತೆಯಿದೆ. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದರೆ 3 ವರ್ಷ ಜೈಲು ಶಿಕ್ಷೆ, ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದವರ ಆಸ್ತಿ ಮಟ್ಟುಗೋಲು, ಆಸ್ತಿ ಇಲ್ಲದಿದ್ದರೆ ಬಂಧನ, ಜೈಲು ಶಿಕ್ಷೆ ವಿಧಿಸುವುದು ಸೇರಿದಂತೆ ಹಲವು ಅಂಶಗಳನ್ನು ಸುಗ್ರೀವಾಜ್ಞೆ ಒಳಗೊಂಡಿದೆ.

ಸುಗ್ರೀವಾಜ್ಞೆ ಹಸಿರು ನಿಶಾನೆ ಸಿಕ್ಕರೆ ವೈದ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸರು, ಹೋಮ್ ಗಾರ್ಡ್ಸ್ ಸೇರಿದಂತೆ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿ ಅಟ್ಟಹಾಸ ಮೆರೆಯುತ್ತಿರುವವರು ಜೈಲಿನ ಕಂಬಿ ಎಣಿಸಬೇಕಿದೆ.

For All Latest Updates

ABOUT THE AUTHOR

...view details