ಕರ್ನಾಟಕ

karnataka

ETV Bharat / state

ಕೊರೊನಾ ಲಸಿಕೆ ವಿತರಣೆಯಲ್ಲಿ ಗುರಿ ತಲುಪದ ಆರೋಗ್ಯ ಇಲಾಖೆ

ನಿಗದಿತ ಗುರಿಯಲ್ಲಿ 64 ಕಡೆ ಲಸಿಕೆ ಕೇಂದ್ರ ತೆರೆಯಲು ಸಾಧ್ಯವಾಗಿಲ್ಲ.‌ ಈ ಲಸಿಕೆಯಿಂದ 9 ಸಿಬ್ಬಂದಿಗೆ ಅಡ್ಡ ಪರಿಣಾಮದ ಲಕ್ಷಣ ಕಂಡು ಬಂದಿವೆ. ಇದಲ್ಲದೆ ಜನರಲ್ಲಿ ಲಸಿಕೆ ಕುರಿತು ಜಾಗೃತಿ ಮೂಡಿಸಿ ಲಸಿಕೆ ವಿತರಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗುತ್ತಿದೆ..

the-department-of-health-which-has-not-reached-the-target-of-corona-vaccine-delivery
ಕೊರೊನಾ ಲಸಿಕೆ ವಿತರಣೆಯಲ್ಲಿ ಗುರಿ ತಲುಪದ ಆರೋಗ್ಯ ಇಲಾಖೆ

By

Published : Jan 27, 2021, 7:18 PM IST

ಬೆಂಗಳೂರು :ಕೊರೊನಾ ಲಸಿಕೆ ವಿತರಣೆ ಆರಂಭವಾಗಿ 10 ದಿನವಾದ್ರೂ ಗುರಿ ಇನ್ನೂ ತಲುಪಿಲ್ಲ.‌ ಟಾರ್ಗೆಟ್ ರೀಚ್ ಆಗುವಲ್ಲಿ ಆರೋಗ್ಯ ಇಲಾಖೆ ಪದೇಪದೆ ವಿಫಲವಾಗುತ್ತಿದೆ. 2ನೇ ಹಂತಕ್ಕೆ ಸಿದ್ಧತೆ ನಡೆಯುತ್ತಿದ್ರೂ ಮೊದಲ ಹಂತದಲ್ಲೇ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.

ಒಟ್ಟು 4,21,385 ಜನರಿಗೆ ಲಸಿಕೆ ಹಾಕಲು ಆರೋಗ್ಯ ಇಲಾಖೆ ಟಾರ್ಗೆಟ್ ಮಾಡಿಕೊಂಡಿತ್ತು.‌ ಈ ಗುರಿಯಲ್ಲಿ ಶೇ.55%ರಷ್ಟು ಮಾತ್ರ ಲಸಿಕೆ ವಿತರಣೆಯಾಗಿದೆ. ಅಂದ್ರೆ 2,31,604 ಆರೋಗ್ಯ ಸಿಬ್ಬಂದಿಗೆ ಮಾತ್ರ ಲಸಿಕೆ ವಿತರಣೆ ಮಾಡಲಾಗಿದೆ.‌

ನಿಗದಿತ ಗುರಿಯಲ್ಲಿ 64 ಕಡೆ ಲಸಿಕೆ ಕೇಂದ್ರ ತೆರೆಯಲು ಸಾಧ್ಯವಾಗಿಲ್ಲ.‌ ಈ ಲಸಿಕೆಯಿಂದ 9 ಸಿಬ್ಬಂದಿಗೆ ಅಡ್ಡ ಪರಿಣಾಮದ ಲಕ್ಷಣ ಕಂಡು ಬಂದಿವೆ. ಇದಲ್ಲದೆ ಜನರಲ್ಲಿ ಲಸಿಕೆ ಕುರಿತು ಜಾಗೃತಿ ಮೂಡಿಸಿ ಲಸಿಕೆ ವಿತರಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಇದನ್ನೂ ಓದಿ:ಅಧಿವೇಶನ ಹಿನ್ನೆಲೆ ವಿಧಾನಸೌಧ‌ ಸುತ್ತಮುತ್ತ ನಿಷೇಧಾಜ್ಞೆ

ABOUT THE AUTHOR

...view details