ಬೆಂಗಳೂರು :ಇಷ್ಟು ಶೀಘ್ರವಾಗಿ ಉಪಚುನಾವಣೆ ನಿರೀಕ್ಷೆ ಮಾಡಿರಲಿಲ್ಲ. ಮಾಧ್ಯಮಗಳಿಂದ ಈ ಬಗ್ಗೆ ಮಾಹಿತಿ ತಿಳಿದುಬಂದಿದ್ದು, ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆಂದು ಅನರ್ಹ ಶಾಸಕ ಆರ್ ಶಂಕರ್ ಹೇಳಿದ್ದಾರೆ.
ಇಷ್ಟು ಬೇಗ ಉಪಚುನಾವಣೆ ಬರುತ್ತೆ ಅಂತ ಅಂದುಕೊಂಡಿರಲಿಲ್ಲ: ಆರ್ ಶಂಕರ್ - latest news of r shankar
ಇಷ್ಟು ಶೀಘ್ರವಾಗಿ ಉಪಚುನಾವಣೆ ನಿರೀಕ್ಷೆ ಮಾಡಿರಲಿಲ್ಲ, ಮಾಧ್ಯಮಗಳಿಂದ ಉಪಚುನಾವಣೆ ಮಾಹಿತಿ ತಿಳಿದುಬಂದಿದೆಯೆಂದು ಅನರ್ಹ ಶಾಸಕ ಆರ್ ಶಂಕರ್ ಹೇಳಿದ್ದಾರೆ.
ಅನರ್ಹ ಶಾಸಕ ಆರ್ ಶಂಕರ್
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಮವಾರ ನಮ್ಮ ಅರ್ಜಿ ವಿಚಾರಣೆಗೆ ಬರಲಿದೆ. ನಾನು ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿದ್ದೇನೆ, ನನಗೆ ಅನರ್ಹತೆ ಅನ್ವಯ ಆಗುವುದಿಲ್ಲ ಎಂದರು. ಜೊತೆಗೆ ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದೆ ಹೋಗುತ್ತೇವೆಂದು ಹೇಳಿದರು.