ಬೆಂಗಳೂರು: ಕೇವಲ ಕೇಸರಿ ಸೇವನೆಯಿಂದ ಮಗು ಶ್ವೇತ ವರ್ಣದ ಚರ್ಮ ಹೊಂದುವುದಿಲ್ಲ, ಗಂಡು-ಹೆಣ್ಣಿನ ವಂಶವಾಹಿಯೇ ಹುಟ್ಟುವ ಮಗುವಿನ ಚರ್ಮದ ವರ್ಣಕ್ಕೆ ಕಾರಣ, ಕೇಸರಿ ಸೇವನೆಯಿಂದ ಈ ವಂಶವಾಹಿಗಳ ಬದಲಾವಣೆ ಸಾಧ್ಯವಿಲ್ಲ ಎಂದು ಪದ್ಮಶ್ರೀ ಪುರಸ್ಕೃತೆ ಡಾ.ಕಾಮಿನಿ ಎ. ರಾವ್ ಹೇಳಿದ್ದಾರೆ.
ಬೆಂಗಳೂರಿನ ಕೋರಮಂಗಲ ರಾಷ್ಟ್ರೀಯ ಕ್ರೀಡಾ ಗ್ರಾಮ ಕ್ಲಬ್‌ನಲ್ಲಿ ಮಾನವ ಭ್ರೂಣ ವಿಕಿರಣ ಶಾಸ್ತ್ರಜ್ಞ "ಆಡ್ ಅನ್ ಸ್ಕಾನ್ಸ್ ಅಂಡ್ ಲ್ಯಾಬ್" ಸಂಸ್ಥಾಪಕ ಡಾ. ಸುನಿಲ್ ಕುಮಾರ್ ಜಿ.ಎಸ್ ಬರೆದ ‘ಡ್ಯೂ ಡೇಟ್’, ಗರ್ಭಿಣಿಯರಿಗೆ ಸಮಗ್ರ ಮಾಹಿತಿಯ ವೈದ್ಯಕೀಯ ಪುಸ್ತಕವನ್ನು ಮಿಲನ್ ಗ್ರೂಪ್ ಆಫ್ ಹಾಸ್ಪಿಟಲ್‌ಗಳ ಸಂಸ್ಥಾಪಕಿ ಡಾ.ಕಾಮಿನಿ ಎ.ರಾವ್ ಬಿಡುಗಡೆ ಮಾಡಿ ಮಾತನಾಡಿದ್ದಾರೆ.
ಗರ್ಭಧಾರಣೆಯ ಕುರಿತ ತಪ್ಪು ತಿಳುವಳಿಕೆಗಳನ್ನು ನಿವಾರಿಸುವಲ್ಲಿ ಈ ಪುಸ್ತಕದ ಓದು ಸಹಕಾರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.