ಆನೇಕಲ್:ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆ ಬೆಂಗಳೂರು-ಹೊಸೂರು ಹೆದ್ದಾರಿಯ ಚಂದಾಪುರ ಪುರಸಭೆಯ 33 ಮಳಿಗೆಗಳ ಟೆಂಡರ್ ಬಹಿರಂಗ ಹರಾಜು ಆರಂಭಗೊಂಡಿದೆ.
ಆನೇಕಲ್: ಚಂದಾಪುರ ಪುರಸಭೆ ಮಳಿಗೆಗಳ ಟೆಂಡರ್ ಹರಾಜು ಆರಂಭ
ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆ ಬೆಂಗಳೂರು-ಹೊಸೂರು ಹೆದ್ದಾರಿಯ ಚಂದಾಪುರ ಪುರಸಭೆಯ 33 ಮಳಿಗೆಗಳ ಟೆಂಡರ್ ಬಹಿರಂಗ ಹರಾಜು ಆರಂಭಗೊಂಡಿದೆ. ಆದರೆ, ಲಾಭಕರವಲ್ಲದ ಅಂಗಡಿಗಳನ್ನು ಮಾತ್ರ ಹರಾಜಿಗೆ ಬಿಟ್ಟಿದ್ದಾರೆ ಎಂದು ಗ್ರಾಹಕರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರಿಗೆ ಸಮರ್ಪಕ ಮಾಹಿತಿ ನೀಡದೆ ಪುರಸಭೆಯ ಆವರಣದಲ್ಲಿ ದೊಡ್ಡ ಪೆಂಡಾಲ್ ಹಾಕಿ, ಟೆಂಡರ್ ಬಹಿರಂಗ ಹರಾಜು ಮಾಡಲಾಗಿದೆ. ಕೆಲ ಅಂಗಡಿಗಳ ಹರಾಜನ್ನು ಬಚ್ಚಿಟ್ಟು, ಉಳಿದ ಅಂಗಡಿಗಳನ್ನಷ್ಟೇ ಹರಾಜಿಗೆ ಕರೆಯಲಾಗಿದೆ. ಇದರಿಂದ ಹರಾಜಿಗಾಗಿ ಡಿಡಿ ಕಟ್ಟಿದ್ದ ಗ್ರಾಹಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆ ಅಧ್ಯಕ್ಷರು ಹಾಗೂ ಪಿಡಿಒ ಇಲ್ಲದೆ ಕರೆದ ಬಹಿರಂಗ ಹರಾಜು ಉದ್ದೇಶಪೂರ್ವಕವಾಗಿದೆ. ಉಳ್ಳವರಿಗೆ ಆಯಕಟ್ಟು ಜಾಗದಲ್ಲಿರುವ ಅಂಗಡಿಗಳನ್ನು ನೀಡಿ, ಲಾಭಕರವಲ್ಲದ ಅಂಗಡಿಗಳನ್ನು ಮಾತ್ರ ಹರಾಜಿಗೆ ಬಿಟ್ಟಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.