ಕರ್ನಾಟಕ

karnataka

ETV Bharat / state

ಮುಖ್ಯಮಂತ್ರಿಗಳ‌ ಗೃಹ ಕಚೇರಿ ಕೃಷ್ಣಾದಲ್ಲಿ 'ಎಸಿ'ಗೆ ತಾತ್ಕಾಲಿಕ ನಿರ್ಬಂಧ - ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ

ಕೊರೊನಾ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೆಚ್ಚಿನ ಕಾಳಜಿ ವಹಿಸಿದ್ದು, ಮುಖ್ಯಮಂತ್ರಿಗಳ‌ ಗೃಹ ಕಚೇರಿ ಕೃಷ್ಣಾದಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಬಳಕೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.

Chief Minister's Home Office Krishna
ಮುಖ್ಯಮಂತ್ರಿಗಳ‌ ಗೃಹ ಕಚೇರಿ ಕೃಷ್ಣಾ

By

Published : Jun 5, 2020, 3:53 PM IST

ಬೆಂಗಳೂರು: ಮುಖ್ಯಮಂತ್ರಿಗಳ‌ ಗೃಹ ಕಚೇರಿ ಕೃಷ್ಣಾದಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಬಳಕೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ಮುಂಜಾಗ್ರತಾ ಕ್ರಮವಾಗಿ ಎಸಿ ಬಳಕೆ ನಿಲ್ಲಿಸಿ, ಸ್ವಾಭಾವಿಕ ಪರಿಸರದಲ್ಲೇ ಸಭೆಗಳನ್ನು ನಡೆಸಲಾಗುತ್ತಿದೆ.

ಕೊರೊನಾ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೆಚ್ಚಿನ ಕಾಳಜಿ ವಹಿಸಿದ್ದು, ಆರೋಗ್ಯ ಸೇತು ಆ್ಯಪ್ ಇದ್ದರಷ್ಟೇ ಕೃಷ್ಣಾಗೆ ಪ್ರವೇಶ ಎನ್ನುವ ನಿಯಮದ ನಂತರ ಕಚೇರಿಯಲ್ಲಿ ಹವಾನಿಯಂತ್ರಿತ ವ್ಯವಸ್ಥೆಗೂ ನಿರ್ಬಂಧ ಹೇರಲಾಗಿದೆ. ಪ್ರತಿನಿತ್ಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುವ ಸಿಎಂ, ಅಧಿಕಾರಿಗಳ ಸಭೆಗಳನ್ನೂ ನಡೆಸುತ್ತಿದ್ದಾರೆ. ಆದರೂ ಸಭಾಂಗಣದ ಎಸಿಗಳನ್ನು ಬಳಸದೇ ಎಸಿ ಯಂತ್ರ ಆಫ್ ಮಾಡಿ ಕಿಟಕಿಗಳನ್ನು ತೆರೆದು ಸಭೆ ನಡೆಸಲಾಗುತ್ತಿದೆ.

ಮುಖ್ಯಮಂತ್ರಿಗಳ‌ ಗೃಹ ಕಚೇರಿ ಕೃಷ್ಣಾ

ಕಡಿಮೆ ತಾಪಮಾನದಲ್ಲಿ ಕೋವಿಡ್-19 ವೈರಾಣು ಜೀವತಾವಧಿ ಜಾಸ್ತಿ ಇರಲಿದೆ. 24 ಡಿಗ್ರಿಗಿಂತಲೂ ಕಡಿಮೆ ಉಷ್ಣತೆ ಕೊರೊನಾ ವೈರಸ್​​​​​ಗೆ ಪೂರಕವಾಗಲಿದೆ. ಒಂದು ವೇಳೆ ಎಸಿ ಬಳಸಿದಲ್ಲಿ ಯಾರ ಮೂಲಕವಾದರೂ ವೈರಾಣು ಸಭೆಯ ಸ್ಥಳಕ್ಕೆ ಬಂದರೆ, ಅಲ್ಲಿ ಹೆಚ್ಚು ಕಾಲ ಜೀವಂತವಾಗಿರಲಿದೆ ಜೊತೆಗೆ ಬೇರೊಬ್ಬರಿಗೆ ಸುಲಭವಾಗಿ ಹರಡಲಿದೆ. ಹಾಗಾಗಿ, ಹವಾನಿಯಂತ್ರಿತ ಸಾಧನಗಳ ಬಳಕೆಯನ್ನು ಸ್ಥಗಿತಗೊಳಿಸಿ ನೈಸರ್ಗಿಕ ತಾಪಮಾನದಲ್ಲೇ ಕೊಠಡಿಗಳಲ್ಲಿ ಸಭೆ ನಡೆಸಲಾಗುತ್ತಿದೆ.

ಸಭಾಂಗಣದ ಕಿಟಕಿ-ಬಾಗಿಲುಗಳನ್ನು ತೆರೆದು, ಫ್ಯಾನ್​​​​​ಗಳನ್ನು ಬಳಕೆ ಮಾಡಲಾಗುತ್ತಿದೆ. ಆರೋಗ್ಯ ಸೇತು ಕಡ್ಡಾಯ, ಪ್ರತಿಯೊಬ್ಬರ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯವಾಗಿದ್ದರೂ ಹೆಚ್ಚುವರಿಯಾಗಿ ಎಸಿ ಬಳಕೆಗೂ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿ ಕೊರೊನಾ ಮುಂಜಾಗ್ರತಾ ಕ್ರಮವನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.

ABOUT THE AUTHOR

...view details