ಬೆಂಗಳೂರು: ಈ ದೃಶ್ಯ ನೋಡಿದರೆ ಈತ ಪ್ರಾಧ್ಯಾಪಕನೋ ಅಥವಾ ರಾಕ್ಷಸನೋ ಅನ್ನಿಸದೇ ಇರದು. ರಾಜಾಜಿನಗರದ ಬಸವೇಶ್ವರ ಕಾಲೇಜಿನ ಪ್ರಾಧ್ಯಾಪಕನೊಬ್ಬ ಕ್ಲಾಸ್ ರೂಂನಲ್ಲೇ ವಿದ್ಯಾರ್ಥಿಯನ್ನು ಮನ ಬಂದಂತೆ ಥಳಿಸಿದ್ದಾನೆ.
ಕ್ಲಾಸ್‌ರೂಂನಲ್ಲೇ ವಿದ್ಯಾರ್ಥಿಯನ್ನ ಅಟ್ಟಾಡಿಸಿ ಥಳಿಸುವ ಸಿಟ್ಟು ಪ್ರಾಧ್ಯಾಪಕನಿಗೇಕೆ ಬಂತು? ವೈರಲ್ ವಿಡಿಯೋ! - Video viral
ರಾಜಾಜಿನಗರದ ಬಸವೇಶ್ವರ ಕಾಲೇಜಿನ ಪ್ರಾಧ್ಯಾಪಕ ಕ್ಲಾಸ್ ರೂಂನಲ್ಲಿ ವಿದ್ಯಾರ್ಥಿಯನ್ನು ಮನ ಬಂದಂತೆ ಥಳಿಸಿದ್ದಾನೆ.
ವಿದ್ಯಾರ್ಥಿಯನ್ನ ಮನಬಂದಂತೆ ಥಳಿಸಿದ ಶಿಕ್ಷಕ
ಕೇವಲ ಸ್ಟಿಕ್ ಮುರಿದ ಎಂಬ ಕಾರಣಕ್ಕೆ ಪ್ರಾಧ್ಯಾಪಕ ಹರೀಶ್ ವಿದ್ಯಾರ್ಥಿ ಮೇಲೆ ಈ ರೀತಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾನೆ. ವಿದ್ಯಾರ್ಥಿಗೆ ಪ್ರಾಧ್ಯಾಪಕ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇನ್ನು, ಹಲ್ಲೆಗೊಳಗಾದ ವಿದ್ಯಾರ್ಥಿ ಸದ್ಯ ಕಾಲೇಜಿಗೆ ಬರುತ್ತಿಲ್ಲ. ಹಾಗೆ ಹಲ್ಲೆ ಮಾಡಿದ ಪ್ರಾಧ್ಯಾಪಕ ಹರೀಶ್ ಕೂಡ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಾಲೇಜಿನ ಪ್ರಿನ್ಸಿಪಾಲ್ ಜ್ಯೋತಿ ಸಿ.ಎನ್ ಕೂಡ ನಿರಾಕರಿಸಿದ್ದಾರೆ.
Last Updated : Oct 18, 2019, 2:55 PM IST