ಕರ್ನಾಟಕ

karnataka

ETV Bharat / state

ತಮಿಳು ನಟಿಗೆ ಕಿರುಕುಳ ನೀಡಿದನಾ ಕೋರಿಯೋಗ್ರಾಫರ್?:  ದೂರು ದಾಖಲು

ನಟಿಗೆ ಆಕೆಯ ಪತಿ ಕಿರುಕುಳ ನೀಡಿ ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸಿದ್ದಾನೆಂಬ ಗಂಭೀರ ಆರೋಪ ಕೇಳಿಬಂದಿದ್ದು, ನಟಿ‌ ದೂರು ದಾಖಲಿಸಿದ್ದಾಳೆ.

Tamil actress
ಕೊಡಿಗೆಹಳ್ಳಿ‌ ಪೊಲೀಸ್ ಠಾಣೆಯಲ್ಲಿ ದೂರು

By

Published : Jan 6, 2020, 2:33 PM IST

ಬೆಂಗಳೂರು:ನಟಿ ಹಾಗೂ ಡ್ಯಾನ್ಸರ್ ಆಗಿರುವ ಮಹಿಳೆಗೆ ಆಕೆಯ ಪತಿ ಕಿರುಕುಳ ನೀಡಿ ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸಿದ್ದಾನೆಂಬ ಗಂಭೀರ ಆರೋಪ ಕೇಳಿಬಂದಿದ್ದು, ನಟಿ‌ ಬೆಂಗಳೂರಿನ ಕೊಡಿಗೆಹಳ್ಳಿ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೊಡಿಗೆಹಳ್ಳಿ‌ ಪೊಲೀಸ್ ಠಾಣೆಯಲ್ಲಿ ದೂರು

2017ರಂದು ವರದರಾಜನ್ ಎಂಬ ಕೋರಿಯೋಗ್ರಾಫರ್​ ಅವರನ್ನ ಲವ್ ಮಾಡಿ ನಂತರ ದೂರುದಾರೆ ನಟಿ ಮದುವೆಯಾಗಿದ್ದರು. ಆದರೆ, ಮದುವೆ ಸಂದರ್ಭದಲ್ಲಿ ವರದಕ್ಷಿಣೆಗಾಗಿ ₹ 25 ಲಕ್ಷ ನಗದು‌ 1 ಸೈಟ್, ಮನೆ, ಚಿನ್ನ, ಕಾರು ಹಾಗೂ ಗೃಹ ಬಳಕೆಯ ವಸ್ತುಗಳನ್ನು ವರದರಾಜನ್ ಕುಟುಂಬಸ್ಥರು ಕೇಳಿದ್ದರು. ಹೀಗಾಗಿ ನಟಿಯ ತಂದೆ, ತಾಯಿ ₹ 5 ಲಕ್ಷ ನಗದು, 1 ಚಿನ್ನದ ಚೈನ್ ಸೇರಿದಂತೆ ₹15 ಲಕ್ಷ ಮೌಲ್ಯದ ವಸ್ತುಗಳನ್ನು ನೀಡಿ ಮದುವೆ ಮಾಡಿದ್ದರು. ಮದುವೆಯಾದ ನಂತ್ರ ನಟಿ ಕೊಡಿಗೇಹಳ್ಳಿ ಬಳಿಯ ಗಂಡನ ಮನೆಯಲ್ಲಿ ವಾಸವಾಗಿದ್ದರು. ಇದೇ ವೇಳೆ ಗಂಡನ ಮನೆಯವರು ವರದಕ್ಷಿಣೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ರು, ಅಷ್ಟು ಮಾತ್ರವಲ್ಲದೇ ಆಕೆಯ ಗಂಡ ವರದರಾಜನ್ ಪ್ರತಿ ದಿನ ಕುಡಿದು ಬಂದು ಹೆಚ್ಚುವರಿ ಚಿನ್ನಾಭರಣ, ಸೈಟ್, ನಗದು ತರುವಂತೆ ಒತ್ತಾಯ ಮಾಡಿದ್ರು ಎನ್ನಲಾಗಿದೆ.

ಇದರಿಂದ ನೊಂದ ನಟಿ ಗಂಡನಿಗೆ ವಿವಿಧ ಡ್ಯಾನ್ಸ್ ಅಕಾಡಮಿ ತೆರೆಯಲು ಹಣ ನೀಡಿದ್ರು, ನಿತ್ಯ ಹಿಂಸೆ ನೀಡಿ ನಂತ್ರ ಬೇರೆ ಯುವತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ಇದನ್ನ ಪ್ರಶ್ನೆ ಮಾಡಿದಕ್ಕೆ ಆತನ ಪೋಷಕರು ನನ್ನ ಮಗ ಗಂಡಸು ಆತ ಏನ್ ಬೇಕಾದ್ರು ಮಾಡ್ತಾನೆ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿ, ನಟಿ ಗಂಡ ಹಾಗೂ ಆತನ ಮನೆಯವರ ವಿರುದ್ಧ ಕೊಡಿಗೆಹಳ್ಳಿ‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇನ್ನು ನಟಿ ತಮಿಳಿನ ಮಾಂಡಾ ಮಾಯಿಲಾದ ರಿಯಾಲಿಟಿ ಶೋ ವಿನ್ನರ್ ಆಗಿದ್ದು, ಹಲವಾರು ಸೀರಿಯಲ್ ಹಾಗೆ ಕೆಲ ‌ಕನ್ನಡ ರಿಯಾಲಿಟಿ ಶೋ, ತಮಿಳು ಸಿನಿಮಾದಲ್ಲಿ ನಟನೆ ‌ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

For All Latest Updates

ABOUT THE AUTHOR

...view details