ಕರ್ನಾಟಕ

karnataka

ETV Bharat / state

ಕಾರ್ಮಿಕರ ಪ್ರತಿಭಟನೆ ವೇಳೆ CAA, NRC ಬಗ್ಗೆ ಮಾತಿನ ಚಕಮಕಿ..ಧ್ವನಿ ಎತ್ತಿದವರು ಪೊಲೀಸರ ವಶಕ್ಕೆ !

ಫ್ರೀಡಂ ಪಾರ್ಕ್​ನಲ್ಲಿನ ಪ್ರತಿಭಟನೆ ವೇಳೆ ಪೌರತ್ವ ಕಾಯ್ದೆ, ಎನ್​ಆರ್​ಸಿ ಬಗ್ಗೆ ಕೆಲ ಕಾರ್ಮಿಕ ಸಂಘಟನೆಗಳ ಮುಖಂಡರು ಸ್ಟೇಜ್​ನಲ್ಲಿ ಧ್ವನಿ ಎತ್ತಿ ಸಮಸ್ಯೆಗೆ ಕಾರಣರಾದರು. ಈ ಸಂಬಂಧ ಕೆಲವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಇನ್ನೂ ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಶನ್ ಕೂಡಾ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Talk about CAA, NRC in workers protest....some are arrested
ಕಾರ್ಮಿಕರ ಪ್ರತಿಭಟನೆ ವೇಳೆ CAA, NRC ಬಗ್ಗೆ ಮಾತಿನ ಚಕಮಕಿ..ಧ್ವನಿ ಎತ್ತಿದವರು ಪೊಲೀಸರ ವಶಕ್ಕೆ !

By

Published : Jan 8, 2020, 2:22 PM IST

ಬೆಂಗಳೂರು:ಫ್ರೀಡಂಪಾರ್ಕ್​ನಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಸಮಾವೇಶ ನಡೆಸುತ್ತಿದ್ದು, ಪ್ರತಿಭಟನೆ ವೇಳೆ ಪೌರತ್ವ ಕಾಯ್ದೆ, ಎನ್​ಆರ್​ಸಿ ಬಗ್ಗೆ ಕೆಲ ಕಾರ್ಮಿಕ ಸಂಘಟನೆಗಳ ಮುಖಂಡರು ಸ್ಟೇಜ್​ನಲ್ಲಿ ಧ್ವನಿ ಎತ್ತಿ ಸಮಸ್ಯೆಗೆ ಕಾರಣರಾದರು.

ಈ ವೇಳೆ, ಕೆಳಗಡೆ ಕುಳಿತ ಕೆಲ ಕಾರ್ಮಿಕರು ಹಾಗೂ ಕಿರ್ಲೋಸ್ಕರ್ ಸಂಸ್ಥೆಯ ಕಾರ್ಮಿಕರು CAA ಹಾಗೂ NRC ಬಗ್ಗೆ ಧ್ವನಿ ಎತ್ತಿದ್ದಕ್ಕೆ ಅಸಮಾಧಾನಗೊಂಡು ಕಾರ್ಮಿಕರ ಬೇಡಿಕೆಗೂ ಸಿಎಎ ಹಾಗೂ ಎನ್​ಆರ್​ಸಿ ಗೂ ಸಂಬಂಧವಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಬಳಿಕ ಕಾರ್ಮಿಕ ಸಂಘಟನೆ ಮುಖಂಡರುಗಳ ನಡುವೆ ನೂಕಾಟ ತಳ್ಳಾಟ ನಡೆಸಿ, ಹೊಡೆದಾಟ ಕೂಡಾ ನಡೆಯಿತು. ಪರಿಣಾಮ ಪೊಲೀಸರು ಮಧ್ಯಸ್ತಿಕೆ ವಹಿಸಿ ಸಂಘರ್ಷವನ್ನು ತಿಳಿಗೊಳಿಸಿದರು. ಅಲ್ಲದೇ ಸಮಸ್ಯೆಗೆ ಕಾರಣರಾದ ಕೆಲವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಕಾರ್ಮಿಕರ ಪ್ರತಿಭಟನೆ ವೇಳೆ CAA, NRC ಬಗ್ಗೆ ಮಾತಿನ ಚಕಮಕಿ..ಧ್ವನಿ ಎತ್ತಿದವರು ಪೊಲೀಸರ ವಶಕ್ಕೆ !

ಇನ್ನೂ ಕಾರ್ಮಿಕ ಸಂಘಟನೆಗಳ ಜೊತೆ, ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರುದ್ಧ ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಶನ್ ಕೂಡಾ ಪ್ರತಿಭಟನೆ ನಡೆಸಿತು. ಟೌನ್ ಹಾಲ್ ಮುಂಭಾಗದಲ್ಲಿರುವ ಕೆನರಾ ಬ್ಯಾಂಕ್ ಆವರಣದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಶನ್​ನ ಜನರಲ್ ಸಕ್ರೆಟರಿ ಜಿ.ರಾಧಾಕೃಷ್ಣ ಮಾತನಾಡಿ, ಬ್ಯಾಂಕ್​ಗಳ ವಿಲೀನದಿಂದ ಸಾಕಷ್ಟು ನೌಕರರು ಕೆಲಸ ಕಳೆದುಕೊಳ್ಳುತ್ತಾರೆ. ಹಳ್ಳಿಗಳಲ್ಲಿ, ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೌಲಭ್ಯಗಳೂ ಸಿಗೋದಿಲ್ಲ. ಕೇಂದ್ರ ಸರ್ಕಾರ ಈ ಬ್ಯಾಂಕ್​ಗಳ ವಿಲೀನ ಹಾಗೂ ಖಾಸಗೀಕರಣ ನೀತಿಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ಇನ್ನೂ ಬ್ಯಾಂಕ್ ಮುಳುಗಡೆಯಾದ್ರೆ ಜನರ ಠೇವಣಿ ಹಣವನ್ನೂ ಬ್ಯಾಂಕ್ ನಷ್ಟಕ್ಕೆ ವಜಾ ಮಾಡುವ ಎಫ್​ಎಸ್​ಡಿಆರ್ ನಿಯಮವನ್ನೂ ವಿರೋಧಿಸುತ್ತೇವೆ ಎಂದರು.

For All Latest Updates

ABOUT THE AUTHOR

...view details