ಕರ್ನಾಟಕ

karnataka

ETV Bharat / state

ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022-23 ; ಕರ್ನಾಟಕ ಸಂಭಾವ್ಯ ತಂಡ ಪ್ರಕಟ - ಈಟಿವಿ ಭಾರತ ಕನ್ನಡ

ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟಿಸಿದೆ. ಅಕ್ಟೋಬರ್​ 11ರಂದು ಪಂದ್ಯಗಳು ಶುರುವಾಗಲಿದೆ.

syed-mushtaq-ali-trophy-karnataka-state-team-announced
ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022-23 ; ಕರ್ನಾಟಕ ಸಂಭಾವ್ಯ ತಂಡ ಪ್ರಕಟ

By

Published : Sep 27, 2022, 8:49 PM IST

ಬೆಂಗಳೂರು: ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟಿಸಿದೆ. 25 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್ ಜೊತೆ ಇತ್ತೀಚಿಗೆ ಅಂತ್ಯವಾದ ಮಹಾರಾಜ ಟ್ರೋಫಿಯಲ್ಲಿ ಗಮನ ಸೆಳೆದ ಹೊಸ ಪ್ರತಿಭೆಗಳಾದ ಚೇತನ್ ಎಲ್.ಆರ್, ರೋಹನ್ ಪಾಟೀಲ್, ಮನೋಜ್ ಭಾಂಡಗೆ, ರಿಷಿ ಬೋಪಣ್ಣ, ರಿತೇಶ್ ಭಟ್ಕಳ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅನುಭವಿಗಳಾದ ಕರುಣ್ ನಾಯರ್, ಪ್ರವೀಣ್ ದುಬೆ ಸ್ಥಾನ‌ ಪಡೆಯುವಲ್ಲಿ ವಿಫಲವಾಗಿದ್ದಾರೆ.

ಅಕ್ಟೋಬರ್ 11ರಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಾರಂಭವಾಗಲಿದ್ದು, ಕಳೆದ ಬಾರಿಯ ರನ್ನರ್ ಅಪ್ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಸಂಭಾವ್ಯ ತಂಡ : ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಚೇತನ್.ಎಲ್.ಆರ್, ರೋಹನ್ ಪಾಟೀಲ್, ಮಯಾಂಕ್ ಅಗರ್ವಾಲ್, ಅಭಿನವ್ ಮನೋಹರ್, ಸಮರ್ಥ್.ಆರ್, ಲವನಿತ್ ಸಿಸೋಡಿಯಾ, ಶರತ್.ಬಿ.ಆರ್, ನಿಹಾಲ್ ಉಲ್ಲಾಳ್, ಕೆ.ಗೌತಮ್, ಶ್ರೇಯಸ್ ಗೋಪಾಲ್, ರಿಷಿ ಬೋಪಣ್ಣ, ರಿತೇಶ್ ಭಟ್ಕಳ್, ಜೆ.ಸುಚಿತ್, ಶುಭಾಂಗ್ ಹೆಗ್ಡೆ, ಕೌಶಿಕ್.ವಿ, ವೈಶಾಕ್.ವಿ, ವಿದ್ಯಾಧರ್ ಪಾಟೀಲ್, ವೆಂಕಟೇಶ್.ಎಂ, ಆದಿತ್ಯ ಗೋಯಲ್, ಮನೋಜ್ ಭಾಂಡಗೆ, ವಿದ್ವತ್ ಕಾವೇರಪ್ಪ, ನಿಕಿನ್ ಜೋಸ್, ಕೆ.ಸಿ.ಕಾರಿಯಪ್ಪ.

ಇದನ್ನೂ ಓದಿ :ಹೊಸ ಮಾದರಿ ಕ್ರೀಡಾ ಪ್ರಪಂಚ ತೆರದಿಡುವ 'ಸಿನಿ ಸ್ಟಾರ್ ಕ್ರಿಕೆಟ್ ಲೀಗ್ ಆರಂಭ'

ABOUT THE AUTHOR

...view details