ಬೆಂಗಳೂರು:ನಾಳೆಯಿಂದ ಶಾಲಾ ತರಗತಿಗಳು ಆರಂಭವಾಗಲಿದ್ದು, ಶಿಕ್ಷಣ ಸಂಸ್ಥೆಗಳು ಈಗಾಗಲೇ ಸಿದ್ಧತೆ ಮುಗಿಸಿವೆ. ಇದೀಗ ಶಾಲಾ ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿಸಲು ಆಡಳಿತ ಮಂಡಳಿಗಳು ನಿರ್ಧರಿಸಿವೆ.
ಜನವರಿ 1ರಿಂದಲೇ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬೇಕಿದ್ದ ಕಾರಣ ಇಂದು ನಗರದ ಕೆಲವು ಶಾಲೆಗಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದರು. ಇದರ ಬೆನ್ನಲ್ಲೆ ನಗರದ ವಿವಿಧ ಶಾಲೆಗಳಲ್ಲಿ ನಾಳೆಯಿಂದ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಿರುವ ಕಾರಣದಿಂದಾಗಿ ಪ್ರತೀ ವಿದ್ಯಾರ್ಥಿಗೆ ಮತ್ತು ಶಿಕ್ಷಕರಿಗೆ ಕೋವಿಡ್ ಪರೀಕ್ಷೆಗೆ ಹಾಜರಾಗಲು ಶಾಲೆಯ ಆಡಳಿತ ಮಂಡಳಿ ಆದೇಶ ನೀಡಿತ್ತು.