ಕರ್ನಾಟಕ

karnataka

ETV Bharat / state

ಸುಪ್ರೀಂಕೋರ್ಟ್ ಕೂಡ ಅನರ್ಹರಿಗೆ ಕಪಾಳಮೋಕ್ಷ ಮಾಡಿದೆ:  ಉಗ್ರಪ್ಪ ವಿಶ್ಲೇಷಣೆ!

ಸುಪ್ರೀಂಕೋರ್ಟ್ ಆದೇಶವನ್ನು ಯಾವುದೇ ರೀತಿ ತಿರಸ್ಕರಿಸದೇ ಚುನಾವಣೆ ಮುಂದೂಡಿದ್ದಾರೆ. ಇಲ್ಲಿ ಸುಪ್ರೀಂಕೋರ್ಟ್ ಪರಿಗಣಿಸುವ ಅಂಶಗಳು ಸಾಕಷ್ಟಿವೆ ಈ ತೀರ್ಪು ನಿಜಕ್ಕೂ ಸ್ವಾಗತಾರ್ಹ ಎಂದ ವಿಎಸ್ ಉಗ್ರಪ್ಪ.

ಸುಪ್ರೀಂಕೋರ್ಟ್ ಕೂಡ ಅನರ್ಹರಿಗೆ ಕಪಾಳಮೋಕ್ಷ ಮಾಡಿದೆ: ವಿಎಸ್ ಉಗ್ರಪ್ಪ

By

Published : Sep 26, 2019, 9:28 PM IST

ಬೆಂಗಳೂರು: ಸುಪ್ರೀಂಕೋರ್ಟ್​ನ ತೀರ್ಪು ನಿಜಕ್ಕೂ ಸ್ವಾಗತಾರ್ಹ ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ಕೂಡ ಅನರ್ಹರಿಗೆ ಕಪಾಳಮೋಕ್ಷ ಮಾಡಿದೆ: ವಿಎಸ್ ಉಗ್ರಪ್ಪ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನೊಬ್ಬ ವಕೀಲನಾಗಿ ಹೇಳಬೇಕು ಅನ್ನೋ ಹಾಗಿದ್ದರೆ, ಎರಡು ದಿವಸಗಳ ಕಾಲ ಅದರಲ್ಲೂ ಅರ್ಜಿದಾರರ ಪರವಾಗಿ ಘಟಾನುಘಟಿಗಳ ವಾದ ಕೇಳಿ, ಇಂದು ನಮ್ಮ ವಾದವನ್ನು ಕೇಳಿದ ಮೇಲೆ ಸುಪ್ರೀಂಕೋರ್ಟ್ ಆದೇಶ ಯಾವುದೇ ರೀತಿ ತಿರಸ್ಕರಿಸದೇ ಚುನಾವಣೆಯನ್ನು ಮುಂದೂಡಿದ್ದಾರೆ. ಇಲ್ಲಿ ಸುಪ್ರೀಂಕೋರ್ಟ್ ಪರಿಗಣಿಸುವ ಅಂಶಗಳು ಸಾಕಷ್ಟಿವೆ. ಸುಪ್ರೀಂ ಇದರಿಂದ ಆದೇಶವನ್ನು ಅಸ್ಪಷ್ಟವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂಬ ಮಹತ್ವದ ತೀರ್ಪನ್ನು ಈ ಆದೇಶದ ಮೂಲಕ ರಾಷ್ಟ್ರದ ಜನತೆಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.

ಇದರಿಂದಾಗಿ ನಾನು ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇನೆ. ಅನರ್ಹ ಶಾಸಕರಲ್ಲಿ ಒಬ್ಬರು ಸ್ಪೀಕರ್ ನೀಡಿದ ಆದೇಶ ಒಂದು ಗಂಟೆಗಳ ಕಾಲ ಸುಪ್ರೀಂಕೋರ್ಟ್ ಮುಂದೆ ಉಳಿಯುವುದಿಲ್ಲ ಎಂದು ಹೇಳಿದ್ದರು. ಆದರೆ, ನಿರಂತರ ಎರಡು ದಿನ ವಾದ - ಪ್ರತಿವಾದ ನಡೆಯಿತು. ನಿನ್ನೆ ಅನರ್ಹರ ಪರವಾದ ವಾದ ಮಾಡಲಾಯಿತು ಇಂದು ನಮ್ಮವರ ವಾದ ಮಂಡಿಸಲಾಯಿತು. ಸಂಪೂರ್ಣ ವಾದವನ್ನು ಆಲಿಸಿದ ನಂತರವೂ ಅನರ್ಹರ ಪರವಾಗಿ ತೀರ್ಪು ಬರಲಿಲ್ಲ. ಇದರಿಂದಾಗಿ ಆದೇಶದಲ್ಲಿ ನ್ಯಾಯಾಲಯ ಪರಿಗಣಿಸಬೇಕಾದ ಅಂಶಗಳು ಸಾಕಷ್ಟಿವೆ ಎನ್ನುವುದು ತಿಳಿದು ಬರುತ್ತಿದೆ. ಸುಪ್ರೀಂಕೋರ್ಟ್​​ ಸಂದೇಶ ಸ್ಪಷ್ಟವಾಗಿದೆ ಇದರಿಂದಾಗಿ ಅನರ್ಹರಿಗೆ ಸುಪ್ರೀಂಕೋರ್ಟ್ ಕೂಡ ಕಪಾಳಮೋಕ್ಷ ಮಾಡಿದೆ ಎಂದು ಹೇಳಲು ಬಯಸುತ್ತೇನೆ ಎಂದರು.

ABOUT THE AUTHOR

...view details