ಬೆಂಗಳೂರು :ನಾನು ಮತ್ತು ಶ್ರೀರಾಮುಲು ಅಣ್ಣ ತಮ್ಮಂದಿರ ಹಾಗಿದ್ದೇವೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಮುನಿಸಿನ ರಾಜಕೀಯ ಮಾಡಲು ನಾವೇನು ಸಣ್ಣ ಮಕ್ಕಳಲ್ಲ ಅಂತಾ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ನಿಯಂತ್ರಣ ಉಸ್ತುವಾರಿ ಸಂಬಂಧ ಆರೋಗ್ಯ ಸಚಿವ ಶ್ರೀರಾಮುಲು,ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನಡುವಿನ ಆಂತರಿಕ ಕಲಹಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ನಿನ್ನೆ ತೆರೆ ಎಳೆದಿದ್ದಾರೆ. ಉಭಯ ಸಚಿವರ ನಡುವಿನ ಸಂಧಾನ ಕಾರ್ಯ ಫಲಕೊಡದ ಹಿನ್ನೆಲೆ ಸಚಿವ ಸುರೇಶ್‌ಕುಮಾರ್ ಹೆಗಲಿಗೆ ಕೊರೊನಾ ಸಂಬಂಧದ ಮಾಹಿತಿಯನ್ನು ನೀಡುವ ಜವಾಬ್ದಾರಿ ವಹಿಸಿದ್ದಾರೆ.