ಕರ್ನಾಟಕ

karnataka

By

Published : May 4, 2021, 6:56 AM IST

ETV Bharat / state

ನೈತಿಕ ಹೊಣೆ ಹೊತ್ತು ಸುಧಾಕರ್ ರಾಜೀನಾಮೆ ನೀಡಲಿ: ಡಿ.ಕೆ ಸುರೇಶ್

ಚಾಮರಾಜನಗರದಲ್ಲಿ ಸಂಭವಿಸಿದ ದುರಂತದ ಬಗ್ಗೆ ಸಂಸದ ಡಿ.ಕೆ ಸುರೇಶ್ ಹಾಗು ಶಾಸಕ ರಾಮಲಿಂಗಾ ರೆಡ್ಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

DK Suresh
ಸಂಸದ ಡಿ.ಕೆ ಸುರೇಶ್ ಆಗ್ರಹ

ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತದ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಾ.‌ಕೆ. ಸುಧಾಕರ್ ರಾಜೀನಾಮೆ ನೀಡಬೇಕು ಎಂದು ಸಂಸದ ಡಿ.ಕೆ. ಸುರೇಶ್ ಆಗ್ರಹಿಸಿದರು.

ಸಂಸದ ಡಿ.ಕೆ ಸುರೇಶ್ ಹಾಗು ಶಾಸಕ ರಾಮಲಿಂಗಾ ರೆಡ್ಡಿ

ಆಕ್ಸಿಜನ್ ಕೊಟ್ಟಿದ್ದರೆ ಅಲ್ಲಿ ಸಾವು ಸಂಭವಿಸುತ್ತಿರಲ್ಲಿಲ್ಲ. ಆಕ್ಸಿಜನ್ ಕೊಡದೇ ತನಿಖೆ ಮಾಡುತ್ತೇವೆ ಎನ್ನುವುದು ಕೇವಲ ಜನರನ್ನು ಕಣ್ಣೊರೆಸುವ ತಂತ್ರ ಎಂದು ಕಿಡಿಕಾರಿದರು.

ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲೂ ಆಕ್ಸಿಜನ್ ಕೊರತೆ ಇದೆ. ಅಲ್ಲಿಗೆ ಪಾಲಕ್ಕಾಡ್​ನಿಂದ ಪೂರೈಕೆಯಾಗಲಿದ್ದು, ವ್ಯವಸ್ಥೆ ಮಾಡುವುದಾಗಿ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ. ಆದರೆ ಯಾವುದೇ ಸಿದ್ಧತೆ ಇಲ್ಲ. ಈಗ ಪ್ರಮುಖವಾಗಿ ಬೇಕಾಗಿರುವುದು ಆಕ್ಸಿಜನ್ ಮತ್ತು ಔಷಧಿಗಳು‌. ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ದೂರಿದರು.

ಅಗತ್ಯ ಔಷಧಗಳನ್ನು ಕೊಟ್ಟರೆ ಮಾತ್ರ ಜೀವ ಉಳಿಸಲು ಸಾಧ್ಯ‌. ಬೆಡ್​ಗಳು ಸರ್ಕಾರಿ ಲೆಕ್ಕಕ್ಕೆ ಮಾತ್ರ ಸೀಮಿತವಾಗಿದೆ. ಬೆಡ್​ಗಳ ಲೆಕ್ಕ ಕೊಡುವುದಕ್ಕೆ ಹೋದರೆ ಹೆಣಗಳ ಲೆಕ್ಕ ಹಾಕಬೇಕಾಗುತ್ತದೆ. ನಿಮ್ಮ (ಸರ್ಕಾರ) ಕೈಯ್ಯಲ್ಲಿ ಆಗದಿದ್ದರೆ ಹೇಳಿ, ಜನ ಹೇಗೋ ತಮ್ಮ ಆಸ್ತಿಯನ್ನೋ, ತಾಳಿಯನ್ನೋ ಮಾರಾಟ ಮಾಡಿ ಜೀವ ಉಳಿಸಿಕೊಳ್ಳುತ್ತಾರೆ ಎಂದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಚಾಮರಾಜನಗರ ಆಕ್ಸಿಜನ್ ಪ್ರಕರಣ ಕುರಿತು ನ್ಯಾಯಾಂಗ ತನಿಖೆ ಆಗಬೇಕು. ಮಾನವ ಹಕ್ಕು ಆಯೋಗಕ್ಕೆ ಈ ಬಗ್ಗೆ ಇಮೇಲ್ ಮೂಲಕ ದೂರು ನೀಡಿದ್ದೇನೆ. ಮೃತರ ಕುಟುಂಬಗಳಿಗೆ 25 ಲಕ್ಷ ರೂ ಪರಿಹಾರ ನೀಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ABOUT THE AUTHOR

...view details