ಬೆಂಗಳೂರು :ಏಪ್ರಿಲ್ 14ಕ್ಕೆ ಲಾಕ್ಡೌನ್ ಅಂತ್ಯವಾಗಲಿದೆ. ನಂತರ ವಿವಿಧ ಇಲಾಖೆಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪಟ್ಟಿ ಮಾಡಿ ನನಗೆ ಕಳುಹಿಸಿ ಎಂದು ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಸೂಚಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಲಾಕ್ಡೌನ್ ಅಂತ್ಯವಾಗುವ ಎಲ್ಲಾ ಸೂಚನೆಗಳು ಕಾಣುತ್ತಿವೆ. ನಾಳೆಯೊಳಗೆ ವರದಿ ಒಪ್ಪಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ.
ಏ.14ಕ್ಕೆ ಲಾಕ್ಡೌನ್ ಅಂತ್ಯ, ನಂತರದ ಕ್ರಮಗಳ ಬಗ್ಗೆ ಮಾಹಿತಿ ನೀಡಿ.. ಎಲ್ಲಾ ಇಲಾಖೆಗಳಿಗೆ ಸಿಎಸ್ ಸೂಚನೆ - ಕೊರೊನಾ
ಕೊರೊನಾ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಲಾಕ್ಡೌನ್ ಅಗತ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇಡೀ ರಾಜ್ಯಕ್ಕೆ ಲಾಕ್ಡೌನ್ ಅನ್ವಯಿಸಬೇಕು ಎಂಬುದಿಲ್ಲ. ಕೊರೊನಾ ಗಂಭೀರವಾಗಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರೆಸುವುದು ಉತ್ತಮ ಎಂಬ ಸಲಹೆಗಳೂ ಕೇಳಿ ಬರುತ್ತಿವೆ.
ಲಾಕ್ಡೌನ್ ಮುಂದುವರೆಸಲು ಕೇಂದ್ರಕ್ಕೆ ಶಿಫಾರಸು :ಕೊರೊನಾ ವೈರಸ್ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಲಾಕ್ಡೌನ್ ಆದೇಶ ಇನ್ನೂ ಜಾರಿಯಲ್ಲಿದೆ. ಇನ್ನೂ ಕೆಲವು ದಿನಗಳ ಕಾಲ ಮುಂದುವರೆಸುವಂತೆ ಕೇಂದ್ರಕ್ಕೆ ಕೋವಿಡ್-19 ಟಾಸ್ಕ್ ಫೋರ್ಸ್ನ ವೈದ್ಯರು ಶಿಫಾರಸು ಮಾಡಲು ಚಿಂತನೆ ನಡೆಸಲಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಲಾಕ್ಡೌನ್ ಅಗತ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇಡೀ ರಾಜ್ಯಕ್ಕೆ ಲಾಕ್ಡೌನ್ ಅನ್ವಯಿಸಬೇಕು ಎಂಬುದಿಲ್ಲ. ಕೊರೊನಾ ಗಂಭೀರವಾಗಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರೆಸುವುದು ಉತ್ತಮ ಎಂಬ ಸಲಹೆಗಳೂ ಕೇಳಿ ಬರುತ್ತಿವೆ.